ಕರಾಚಿ: ಕ್ರಿಕೆಟ್ ಆಡಲ್ಲ ಎಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮೇಲೆ ಕೇಸು ದಾಖಲಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅದರ ಆಡಳಿತ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಮೈದಾನದ ಹೊರಗೆ ಮತ್ತೊಂದು ಹೋರಾಟಕ್ಕೆ ವೇದಿಕೆ ಸಜ್ಜಾಗಲಿದೆ.
2014 ರಲ್ಲಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದ್ದಂತೆ ಉಭಯ ದೇಶಗಳ ನಡುವೆ ಕ್ರಿಕೆಟ್ ಸರಣಿ ಆಯೋಜಿಸಲು ಉರಿ ದಾಳಿಯ ನೆಪವೊಡ್ಡಿ ಬಿಸಿಸಿಐ ನಿರಾಕರಿಸುತ್ತಿದೆ ಎಂಬುದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆರೋಪ.
ಸರಣಿ ರದ್ದಾದ ಹಿನ್ನಲೆಯಲ್ಲಿ ತನಗೆ ಸಾಕಷ್ಟು ನಷ್ಟವಾಗಿದೆ. ಆ ನಷ್ಟ ಪರಿಹಾರವನ್ನು ಬಿಸಿಸಿಐ ತುಂಬಿಕೊಡಬೇಕು ಎಂದು ಈ ಮೊದಲೂ ಪಿಸಿಬಿ ಸಾಕಷ್ಟು ಬಾರಿ ಹೇಳಿಕೊಂಡಿತ್ತು. ಇದೀಗ ಅದೇ ಬೇಡಿಕೆಯೊಂದಿಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಿಸಿಬಿ ಚಿಂತನೆ ನಡೆಸಲಿದೆ. ಕಾನೂನು ಹೋರಾಟದಲ್ಲಿ ಪಾಕಿಸ್ತಾನ ಜಯಗಳಿಸಿದರೆ, ಭಾರತ ಕ್ರಿಕೆಟ್ ಮಂಡಳಿ ದುಬಾರಿ ಬೆಲೆ ತೆರಬೇಕಾದೀತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ