Publish Date: Wed, 16 Aug 2017 (19:01 IST)
Updated Date: Wed, 16 Aug 2017 (19:05 IST)
ಬೌನ್ಸರ್ ಬಡಿದು ಬ್ಯಾಟ್ಸ್`ಮನ್ ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಮರ್ದಾನ್`ನಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಬೌನ್ಸರ್ ತಲೆಗೆ ಬಡಿದು ಜುಬೇರ್ ಅಹಮ್ಮದ್ ಎಂಬಾತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಕ್ವೆಟ್ಟಾ ಬಿಯರ್ಸ್ ತಂಡದ ಪರ 4 ಪಂದ್ಯಗಳನ್ನಾಡಿರುವ ಜುಬೈರ್ ದುರ್ಮರಣಕ್ಕೀಡಾಗಿದ್ಧಾರೆ. ಹೆಲ್ಮೆಟ್ ಧರಿಸದೇ ಆಡಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಸುದ್ದಿಯನ್ನ ಟ್ವಿಟ್ಟರ್`ನಲ್ಲಿ ಪ್ರಕಟಿಸಿದೆ.
ಆಸ್ಟ್ರೇಲಿಯಾ ಆಟಗಾರ ಫಿಲಿಪ್ ಹ್ಯೂಸ್ ಸಾವಿನ ಬಳಿಕ ಜುಬೇರ್ ಅಹಮದ್ ದುರಂತ ಸಾವು ಆಟಗಾರರು ತಮ್ಮ ಸುರಕ್ಷತೆ ಬಗ್ಗೆ ಗಮನ ಹರಿಸಬೇಕೆಂಬುದನ್ನ ಮತ್ತೊಮ್ಮೆ ಎಚ್ಚರಿಸಿದೆ ಎಂದು ಪಿಸಿಬಿ ಟ್ವೀಟ್ ಮಾಡಿದೆ.
26 ಟೆಸ್ಟ್ ಪಂದ್ಯಗಳನ್ನಾಡಿದ್ದ ಫಿಲಿಪ್ ಹ್ಯೂಸ್ 2014ರಲ್ಲಿ ಸೀನ್ ಅಬೋಟ್ ಬೌಲಿಂಗ್`ನಲ್ಲಿ ತಲೆಗೆ ಪೆಟ್ಟು ತಿಂದು ಕುಸಿದು ಬಿದ್ದಿದ್ದರು. ಅತಿಯಾದ ರಕ್ತಸ್ರಾವವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಹ್ಯೂಸ್ ಉಳಿಯಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ