ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಸ್ವದೇಶಿ ಸರಣಿಯನ್ನು ಆಯೋಜಿಸುವುದನ್ನು ನಿಲ್ಲಿಸಬೇಕು ಎಂದು ಮಾಜಿ ನಾಯಕ ಮೊಹಮ್ಮದ್ ಯುಸುಫ್ ಎಚ್ಚರಿಸಿದ್ದಾರೆ.
ಇದರಿಂದಾಗಿ ಪಾಕಿಸ್ತಾನ ಕ್ರಿಕೆಟ್‌ಗೆ ಹಾನಿಯಾಗುತ್ತದೆ ಎಂದೂ ಹೇಳಿದರು. ಅಬು ದಾಬಿ, ಶಾರ್ಜಾ ಮತ್ತು ದುಬೈನ ಚಪ್ಪಟೆ ಮತ್ತು ಕಡಿಮೆ ಬೌನ್ಸ್ ಪಿಚ್‌ಗಳಲ್ಲಿ ಆಡುವುದರಿಂದ ಈಗಾಗಲೇ ನಮ್ಮ ಕ್ರಿಕೆಟ್ ಮೇಲೆ ಮತ್ತು ಆಟಗಾರರ ಮೇಲೆ ದುಷ್ಪರಿಣಾಮ ಬೀರಿದ್ದು, ಅಲ್ಲಿ ನಮ್ಮ ಸರಣಿ ಆಯೋಜಿಸುವುದನ್ನು ನಿಲ್ಲಿಸದಿದ್ದರೆ ನಮ್ಮ ಕ್ರಿಕೆಟ್‌ಗೆ ಹಾನಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಳೆದ ಆರೇಳು ವರ್ಷಗಳಿಂದ ಯುಎಇನಲ್ಲಿ ಪಂದ್ಯಗಳನ್ನು ಆಡಿದ್ದರಿಂದ ಪಾಕಿಸ್ತಾನಿ ಬ್ಯಾಟ್ಸ್‌ಮನ್ ಕೌಶಲ್ಯ ಮತ್ತು ತಂತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನಾವು ದಾಖಲೆಗಳನ್ನು ಸೃಷ್ಟಿಸಬೇಕಾದರೆ ಮಾತ್ರ ಯುಎಇನಲ್ಲಿ ಆಡಬಹುದು. ಆದರೆ ಕ್ರಿಕೆಟ್‌ಗೆ ಮಾತ್ರ ಅದರಿಂದ ಏನೂ ಉಪಯೋಗವಿಲ್ಲ. ಯುಎಇನಲ್ಲಿ ಸ್ವದೇಶಿ ಸರಣಿ ಆಡುವುದನ್ನು ಮುಂದುವರಿಸಿದರೆ ಯಾವುದೇ ಪಿಚ್‌ನಲ್ಲಿ ಆಡುವ ಸಾಮರ್ಥ್ಯವಿರುವ ಆಟಗಾರರನ್ನು ತಯಾರಿಸಲು ನಾವು ವಿಫಲರಾಗುತ್ತೇವೆ ಎಂದು ಯುಸುಫ್ ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.