ಹರ್ಭಜನ್ ಸಿಂಗ್ ವಿಶ್ವಕಪ್ ಸೆಮಿಫೈನಲಿಸ್ಟ್ ಲಿಸ್ಟ್ ನಲ್ಲಿ ಈ ಪ್ರಮುಖ ತಂಡದ ಹೆಸರೇ ಇಲ್ಲ!

ಭಾನುವಾರ, 19 ಮೇ 2019 (07:50 IST)
ಮುಂಬೈ: ಈ ಬಾರಿಯ ವಿಶ್ವಕಪ್ ಕ್ರಿಕೆಟ್ ನಲ್ಲಿ ಯಾವ ತಂಡ ಫೇವರಿಟ್ ಎಂಬ ಚರ್ಚೆ ಈಗಾಗಲೇ ಶುರುವಾಗಿದ್ದು, ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಆಯ್ಕೆಯ ತಂಡವನ್ನು ಹೆಸರಿಸಿದ್ದಾರೆ.


ವಿಶೇಷವೆಂದರೆ ಹರ್ಭಜನ್ ಸಿಂಗ್ ಈ ಬಾರಿಯ ವಿಶ್ವಕಪ್ ನಲ್ಲಿ ಸೆಮಿಫೈನಲ್ ಗೇರಬಹುದಾದ ತಂಡಗಳ ಆಯ್ಕೆ ಮಾಡಿದ್ದು, ಅದರಲ್ಲಿ ಪ್ರಮುಖ ತಂಡ ದ.ಆಫ್ರಿಕಾ ಹೆಸರೇ ಇಲ್ಲ.

ಭಜಿ ಪ್ರಕಾರ ಈ ಬಾರಿ ಟೀಂ ಇಂಡಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ಗೇರಬಹುದಾದ ತಂಡಗಳು. ನ್ಯೂಜಿಲೆಂಡ್ ಐಸಿಸಿ ರ್ಯಾಂಕಿಂಗ್ ನಲ್ಲಿ ದ.ಆಫ್ರಿಕಾದಿಂದ ಕೆಳಗಿದೆ. ಹಾಗಿದ್ದರೂ ದೊಡ್ಡ ಈವೆಂಟ್ ಗಳಲ್ಲಿ ನ್ಯೂಜಿಲೆಂಡ್ ಇದುವರೆಗೆ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಕೀವೀಸ್ ಸೆಮಿಫೈನಲ್ ಗೇರಬಹುದು’ ಎಂದು ಭಜಿ ಲೆಕ್ಕಾಚಾರ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದುಡ್ಡಿಗಾಗಿ ಜನ ಏನೆಲ್ಲಾ ಮಾಡ್ತಾರೋ! ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ ಆಸೀಸ್ ಆಟಗಾರ