Select Your Language

Notifications

webdunia
webdunia
webdunia
webdunia

ಜಸ್ಪ್ರೀತ್ ಬುಮ್ರಾ ಇಲ್ಲ, ಕಳಪೆ ಸಾಧನೆ ಮಾಡಿದ ಬಾಬರ್ ಅಜಮ್ ಐಸಿಸಿ ಟಿ20 ಕ್ರಿಕೆಟರ್ ಲಿಸ್ಟ್ ನಲ್ಲಿ

babar azham

Krishnaveni K

ದುಬೈ , ಸೋಮವಾರ, 30 ಡಿಸೆಂಬರ್ 2024 (11:09 IST)
ದುಬೈ: ಈ ಬಾರಿ ಐಸಿಸಿ ಟಿ20 ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ನಾಮಿನೇಟ್ ಆದ ಕ್ರಿಕೆಟಿಗ ಲಿಸ್ಟ್ ನೋಡಿ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೆ ನಿಜಕ್ಕೂ ಅಚ್ಚರಿಯಾಗಿದೆ. ಕಳಪೆ ಸಾಧನೆ ಮಾಡಿದ ಪಾಕಿಸ್ತಾನದ ಬಾಬರ್ ಅಜಮ್ ಲಿಸ್ಟ್ ನಲ್ಲಿ ಸೇರ್ಪಡೆಯಾಗಿದ್ದಾರೆ.

ಈ ವರ್ಷದಲ್ಲಿ ಯಾರು ಟಿ20 ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೋ ಅವರನ್ನು ಶಾರ್ಟ್ ಲಿಸ್ಟ್ ಮಾಡಿ ಅವರಲ್ಲಿ ಬೆಸ್ಟ್ ಎನಿಸಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಈ ಬಾರಿ ಸ್ವತಃ ಪಾಕ್ ಕ್ರಿಕೆಟ್ ಅಭಿಮಾನಿಗಳಿಂದಲೇ ಕಳಪೆ ಫಾರ್ಮ್ ನಿಂದಾಗಿ ಭಾರೀ ಟೀಕೆಗೊಳಗಾಗಿದ್ದ ಬಾಬರ್ ಅಜಮ್ ನಾಮಿನೇಟ್ ಆಗಿದ್ದಾರೆ. ಆದರೆ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದ ಜಸ್ಪ್ರೀತ್ ಬುಮ್ರಾರನ್ನು ಹೊರಗಿಡಲಾಗಿದೆ.

ಐಸಿಸಿಯ ಈ ನಿರ್ಧಾರ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಬಾಬರ್ ಅಜಮ್ ಈ ವರ್ಷ 23 ಟಿ20 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 33.5 ಸರಾಸರಿಯಲ್ಲಿ ಕೇವಲ 738 ರನ್ ಕಲೆ ಹಾಕಲಷ್ಟೇ ಶಕ್ತರಾಗಿದ್ದಾರೆ. ಅವರ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ನಲ್ಲೂ ದಯನೀಯ ವೈಫಲ್ಯ ಅನುಭವಿಸಿತ್ತು. ಅವರು ಅಡಿದ 23 ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿದ್ದು ಕೇವಲ 7 ಪಂದ್ಯಗಳಲ್ಲಿ. ಹೀಗಿದ್ದರೂ ಬಾಬರ್ ಅಜಮ್ ಟಿ20 ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.

ಆದರೆ ಭಾರತ ತಂಡದ ಅರ್ಷ್ ದೀಪ್ ಸಿಂಗ್ ಮಾತ್ರ ನಾಮಿನೇಟ್ ಆಗಿದ್ದಾರೆ. ಬಾಬರ್ ಅಜಮ್ ಗಿಂತ ಭಾರತದ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಸರಾಸರಿ ಉತ್ತಮವಾಗಿದೆ. ಹಾಗಿದ್ದರೂ ಅವರೆಲ್ಲರನ್ನೂ ಸೈಡ್ ಲೈನ್ ಮಾಡಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ. ಜೊತೆಗೆ ಐಸಿಸಿ ನಾಮಿನೇಷನ್ ಲಿಸ್ಟ್ ನೋಡಿ ನೆಟ್ಟಿಗರು ಇದು ಹೇಗೆ ಸಾಧ್ಯ ಎಂದು ಟ್ರೋಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs AUS: ನಥನ್ ಲಿಯೋನ್ ಗಿಂತಲೂ ಕಡೆಯಾಗಿ ಹೋದ್ಯಲ್ಲೋ ರೋಹಿತ್ ಶರ್ಮಾ