Select Your Language

Notifications

webdunia
webdunia
webdunia
webdunia

ಹೋಟೆಲ್ ಕೊಠಡಿ ಸಿಗದೆ ಪರದಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರು

ಹೋಟೆಲ್ ಕೊಠಡಿ ಸಿಗದೆ ಪರದಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರು
Pune , ಮಂಗಳವಾರ, 17 ಜನವರಿ 2017 (10:28 IST)
ಪುಣೆ: ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯಕವನ್ನು ಟೀಂ ಇಂಡಿಯಾ ಕಟಕ್ ನಲ್ಲಿ ಆಡಲಿದ್ದು, ಅಭ್ಯಾಸ ಆರಂಭಿಸಿದೆ. ಆದರೆ ಕಟಕ್ ಮೈದಾನದಲ್ಲಿ ಅಲ್ಲ. ಮೊದಲ ಏಕದಿನ ನಡೆದ ಪುಣೆಯಲ್ಲಿ!

ಇದೇಕೆ ಹೀಗೆ ಎಂದರೆ, ಕ್ರಿಕೆಟಿಗರಿಗೆ ಹೋಟೆಲ್ ಕೊಠಡಿಯ ಸಮಸ್ಯೆಯಂತೆ. ಇದು ಹೇಳಿ ಕೇಳಿ ಮದುವೆ ಸೀಸನ್. ಹಾಗಾಗಿ ಭಾರತದ ಕ್ರಿಕೆಟಿಗರಿಗೆ ಬೇಕಾದಷ್ಟು ಹೋಟೆಲ್ ಕೊಠಡಿ ಸಿಗಲಿಲ್ಲ. ಇದರಿಂದಾಗಿ ಬುಧವಾರ ಬೆಳಗ್ಗಿನವರೆಗೆ ಉಭಯ ತಂಡಗಳೂ ಪುಣೆಯ ಹೋಟೆಲ್ ನಲ್ಲಿ ಉಳಿದುಕೊಳ್ಳಲಿವೆ. ಅಲ್ಲಿಯೇ ಅಭ್ಯಾಸ ನಡೆಸಲಿವೆ.

ಬುಧವಾರ ಬೆಳಿಗ್ಗೆ ಕಟಕ್ ಗೆ ಬಂದಿಳಿಯಲಿರುವ ಕ್ರಿಕೆಟಿಗರು ಸಂಜೆ ನಾಲ್ಕರ ನಂತರ ಅಭ್ಯಾಸ ನಡೆಸಲಿದ್ದಾರೆ. ಮದುವೆ ಸೀಸನ್ ಆದ್ದರಿಂದ ಗುರುವಾರದವರೆಗೆ ಹೋಟೆಲ್ ಗಳಲ್ಲಿ ಬೇಕಾದಷ್ಟು ಕೊಠಡಿಗಳಿಲ್ಲ. ಬುಧವಾರದಿಂದ ಕೊಠಡಿ ಸಿಗಬಹುದು. ಹಾಗಾಗಿ ತಂಡ ತಡವಾಗಿ ಬರಲಿದೆ. ಆದರೂ ಪಂದ್ಯ ಪುಣೆಯಲ್ಲಿ ನಡೆದಂತೆ ಯಶಸ್ವಿಯಾಗಿ ನಡೆಯಬಹುದು ಎಂಬ ವಿಶ್ವಾಸ ನಮ್ಮದು ಎಂದು ಒರಿಸ್ಸಾ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಆಶೀರ್ಬಾದ್ ಬೆಹ್ರಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗರನ್ನು ಹೊಗಳುವ ಭರದಲ್ಲಿ ನಗೆ ಪಾಟಲಿಗೀಡಾದ ಪಾಕ್ ಸಚಿವ!