Publish Date: Tue, 17 Jan 2017 (10:10 IST)
Updated Date: Tue, 17 Jan 2017 (10:12 IST)
ಕರಾಚಿ: ಇತ್ತೀಚೆಗೆ ಟ್ವಿಟರ್ ನಲ್ಲಿ ವಿಐಪಿಗಳು ಆಗಾಗ ಸುದ್ದಿಯಾಗುವುದು ಸಹಜ. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ ಗೆದ್ದ ಪಾಕಿಸ್ತಾನ ತಂಡವನ್ನು ಹೊಗಳುವ ಭರದಲ್ಲಿ ಪಾಕ್ ಸಚಿವರೊಬ್ಬರು ನಗೆ ಪಾಟಲಿಗೀಡಾಗಿದ್ದಾರೆ.
ನಿನ್ನೆಯಷ್ಟೇ ಪಾಕಿಸ್ತಾನದ ಹಫೀಜ್ ಸಯೀದ್ ನೇತೃತ್ವದ ಕ್ರಿಕೆಟ್ ತಂಡ ಆಸೀಸ್ ವಿರುದ್ಧ ಏಕದಿನ ಪಂದ್ಯವನ್ನು ಆರು ವಿಕೆಟ್ ಗಳಿಂದ ಗೆದ್ದಿತ್ತು. ತಮ್ಮ ದೇಶದ ತಂಡದ ಕ್ರಿಕೆಟಿಗರಿಗೆ ಟ್ವಿಟರ್ ನಲ್ಲಿ ಅಭಿನಂದನೆ ಸಲ್ಲಿಸಿದ ಪಾಕ್ ಸಚಿವ ಶೇಖ್ ರಶೀದ್ ಅಹಮದ್ ವೆಲ್ ಪ್ಲೇಯ್ಡ್ ಗ್ರೀನ್ ಶಿಟ್ಸ್ ಎಂದು ಬರೆದುಕೊಂಡಿದ್ದರು.
ಶರ್ಟ್ಸ್ ಎನ್ನುವ ಬದಲು ಸ್ಪೆಲ್ಲಿಂಗ್ ತಪ್ಪಾಗಿ ಶಿಟ್ಸ್ ಎಂದಿದ್ದು, ಟ್ವಿಟರಿಗರ ಕೆಣಕಿತ್ತು. ಇಷ್ಟೇ ಸಾಕಾಯಿತು. ಯದ್ವಾ ತದ್ವಾ ಪಾಕ್ ಸಚಿವನ ಕಾಲೆಳೆದು ಮಜಾ ತೆಗೆದುಕೊಂಡರು. ಆದರೆ ನಂತರ ಸಚಿವರು ತಪ್ಪು ತಿದ್ದಿಕೊಂಡರೂ, ಅಪಾರ್ಥ ಕೊಡುವಂತಹ ಸಂದೇಶ ಬರೆದು ನಗೆ ಪಾಟಲಿಗೀಡಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ