Webdunia - Bharat's app for daily news and videos

Install App

ನಿತೀಶ್‌, ರಿಂಕು ಅಬ್ಬರಕ್ಕೆ ಬಾಂಗ್ಲಾ ತತ್ತರ: ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಭಾರತದ ಕೈವಶ

Sampriya
ಗುರುವಾರ, 10 ಅಕ್ಟೋಬರ್ 2024 (10:14 IST)
Photo Courtesy X
ನವದೆಹಲಿ: ಯುವ ಬ್ಯಾಟರ್‌ಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ರಿಂಕು ಸಿಂಗ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಬಾಂಗ್ಲಾದೇಶ ಎದುರಿನ ಎರಡನೇ ಟಿ20 ಪಂದ್ಯವನ್ನು 86 ರನ್‌ಗಳಿಂದ ಜಯಿಸಿತು.

ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ 2-0ಯಿಂದ ಗೆದ್ದುಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಿತೀಶ್ ರೆಡ್ಡಿ (74 ರನ್) ಆಕರ್ಷಕ ಬ್ಯಾಟಿಂಗ್ ಮಾಡಿದರು. ರಿಂಕು (53 ರನ್‌) ಅವರೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಭಾರತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 221 ರನ್ ಗಳಿಸಿತು.  


ತಮ್ಮ ವೃತ್ತಿಜೀವನದ ಎರಡನೇ ಅಂತರರಾಷ್ಟ್ರೀಯ ಟಿ20 ಪಂದ್ಯವಾಡಿದ ನಿತೀಶ್ 27 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದರು.  ಸರಣಿಯ ಮೊದಲ ಪಂದ್ಯದಲ್ಲಿ ಮಿಂಚಿದ್ದ ಹಾರ್ದಿಕ್ ಇಲ್ಲಿ ಮತ್ತೆ ಅಬ್ಬರಿಸಿದರು.  

ಕಠಿಣ ಗುರಿಯನ್ನು ಬೆನ್ನಟ್ಟಿದ ಪ್ರವಾಸಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 135 ರನ್ ಗಳಿಸಿತು. ತಂಡದ ಮೆಹಮುದುಲ್ಲಾ (41 ರನ್‌) ಹೊರತುಪಡಿಸಿ ಉಳಿದವರು ನಿರಾಸೆ ಮೂಡಿಸಿದರು.  ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಮಿಂಚಿದ ನಿತೀಶ್ 2 ವಿಕೆಟ್ ಗಳಿಸಿದರು. ವರುಣ್ ಚಕ್ರವರ್ತಿ ಕೂಡ 2 ವಿಕೆಟ್ ಪಡೆದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಬಗ್ಗುಬಡಿದು ಪ್ಲೇ ಆಫ್‌ಗೆ ಮುಂಬೈ ಇಂಡಿಯನ್ಸ್‌ ಎಂಟ್ರಿ

IPL 2025: ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಫೀಲ್ಡಿಂಗ್‌ ಆಯ್ಕೆ: ಯಾರಿಗೆ ಸಿಗುತ್ತೆ ಪ್ಲೇ ಆಫ್‌ ಟಿಕೆಟ್‌

IPL 2025: 7 ಪಂದ್ಯ, 252 ರನ್, 24 ಭರ್ಜರಿ ಸಿಕ್ಸರ್‌: ಇದು 14ರ ಪೋರ ಸೂರ್ಯವಂಶಿ ಸಾಧನೆ

IPL 2025: ಐಪಿಎಲ್‌ ಜಂಜಾಟದ ಮಧ್ಯೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಪಿಕಲ್‌ಬಾಲ್ ಆಡಿದ ವಿರಾಟ್‌ ಕೊಹ್ಲಿ

Viral Video: ಮೈದಾನದಲ್ಲಿ ವೈಭವ್ ಸೂರ್ಯವಂಶಿ ಮಾಡಿದ್ದು ನೋಡಿ ಶಾಕ್ ಆದ ಧೋನಿ

ಮುಂದಿನ ಸುದ್ದಿ
Show comments