Webdunia - Bharat's app for daily news and videos

Install App

ನಾಗ್ಪುರ ಟೆಸ್ಟ್: ಮತ್ತೆ ಕೆಎಲ್ ರಾಹುಲ್ ಗೆ ನಿರಾಸೆ

Webdunia
ಶುಕ್ರವಾರ, 24 ನವೆಂಬರ್ 2017 (16:47 IST)
ನಾಗ್ಪುರ: ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಅಂದುಕೊಂಡಂತೆ ಲಂಕಾವನ್ನು 205 ಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಆದರೆ ಕೆಎಲ್ ರಾಹುಲ್ ಆರಂಭದಲ್ಲೇ ಕೈ ಕೊಟ್ಟಿದ್ದರಿಂದ ಆರಂಭಿಕ ಆಘಾತವನ್ನು ಪಡೆದಿದೆ.
 

ಮೊದಲ ದಿನದಂತ್ಯಕ್ಕೆ ಟೀಂ ಇಂಡಿಯಾ  11 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಇನ್ನೂ ಲಂಕಾ ಮೊದಲ ಇನಿಂಗ್ಸ್ ಮೊತ್ತಕ್ಕಿಂತ 194 ರನ್ ಹಿಂದೆ ಇದೆ. ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ತಲಾ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಇದಕ್ಕೂ ಮೊದಲು ಲಂಕಾದ ಮೊದಲ ಇನಿಂಗ್ಸ್ ನ್ನು ಕೇವಲ 205 ರನ್ ಗಳಿಗೆ ಕಟ್ಟಿ ಹಾಕಲು ಭಾರತದ ಸ್ಪಿನ್ ಜೋಡಿ ಅಶ್ವಿನ್-ಜಡೇಜಾ ಪ್ರಮುಖ ಮಾತ್ರ ವಹಿಸಿದರು. ಅಶ್ವಿನ್ 4 ವಿಕೆಟ್ ಪಡೆದರೆ ಜಡೇಜಾ 3 ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಬಹಳ ದಿನಗಳ ನಂತರ ಅವಕಾಶ ಪಡೆದ ವೇಗಿ ಇಶಾಂತ್ ಶರ್ಮಾ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು 3 ವಿಕೆಟ್ ಕಿತ್ತರು. ಆದರೆ ಉಮೇಶ್ ಯಾದವ್ ವಿಕೆಟ್ ಇಲ್ಲದೇ ನಿರಾಸೆ ಅನುಭವಿಸಿದರು. ಲಂಕಾ ಪರ ನಾಯಕ ದಿನೇಶ್ ಚಂಡಿಮಾಲ್ ಮತ್ತು ಕರುಣರತ್ನೆ ಅರ್ಧಶತಕ ಗಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments