ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ಮಳೆಯಲ್ಲಿ ತೊಯ್ದುಹೋದ ಪಂದ್ಯದಿಂದ ಆಸ್ಟ್ರೇಲಿಯಾಕ್ಕೆ ಸಮೀಕರಣವನ್ನು ಜಟಿಲಗೊಳಿಸಿದೆ. ಆಸೀಸ್ ಫೈನಲ್ ಲೀಗ್ ಪಂದ್ಯಕ್ಕೆ ಗೆಲ್ಲಲೇಬೇಕಾದ ಸ್ಥಿತಿಯೊಂದಿಗೆ ಹೋಗುತ್ತಿದೆ. ವೆಸ್ಟ್ ಇಂಡೀಸ್ ಕೂಡ ಇದೇ ರೀತಿಯಲ್ಲಿ ದೋಣಿಯಲ್ಲಿ ತೇಲುತ್ತಿದೆ. ಪಂದ್ಯ ಸೋತರೆ ತಾಂತ್ರಿಕವಾಗಿ ಅವರು ಪಂದ್ಯಾವಳಿಯಿಂದ ಡಂಪ್ ಆಗುವುದಿಲ್ಲ. ಅವರು ದಕ್ಷಿಣ ಆಫ್ರಿಕಾ ತಂಡವನ್ನು ಬೋನಸ್ ಪಾಯಿಂಟ್ ಮೂಲಕ ಸೋಲಿಸಬೇಕಾಗುತ್ತದೆ. ಇದು ನಿಜವಾಗಲೂ ಕಠಿಣವಾದ ಕೆಲಸ.
ಆಸ್ಟ್ರೇಲಿಯಾ ಬ್ಯಾಟಿಂಗ್ ಬಲವು ಹಿಂದಿನ ಪಂದ್ಯದಲ್ಲಿ ಅವರಿಗೆ ಕೈಕೊಟ್ಟಿದೆ. ಆಸೀಸ್ ನಾಯಕ ಕೂಡ ತಂಡದ ಪ್ರಯತ್ನ ಕುರಿತು ತೃಪ್ತಿ ಹೊಂದಿಲ್ಲ ಮತ್ತು ತಂಡಕ್ಕೆ ಉನ್ನತ ಮಟ್ಟ ಕಾಯ್ದುಕೊಳ್ಳಲು ಕರೆನೀಡಿದ್ದಾರೆ.
ವೆಸ್ಟ್ ಇಂಡೀಸ್ ಪ್ರತಿ ಜಯದ ಹಿಂದೆ ಮರುಪಂದ್ಯದಲ್ಲಿ ಇನ್ನೊಂದು ಸೋಲನ್ನು ಅನುಭವಿಸಿದೆ. ಆಸೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನಿಂದ ಬೋನಸ್ ಪಾಯಿಂಟ್‌ನಲ್ಲಿ ಜಯ ಗಳಿಸಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದೆ.
ವೆಸ್ಟ್ ಇಂಡೀಸ್ ಕೆಲವು ಸಂದರ್ಭಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನಲ್ಲಿ ಕೀರನ್ ಪೋಲಾರ್ಡ್ ಮತ್ತು ಆಸೀಸ್ ವಿರುದ್ಧ ಗೆಲುವಿನಲ್ಲಿ ಸ್ಯಾಮುಯಲ್ಸ್ ಶ್ರೇಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಸುನಿಲ್ ನಾರಾಯಣ್ ಬೌಲಿಂಗ್ ಮೊನಚಾಗಿತ್ತು. ಆದರೆ ಇಡೀ ತಂಡವಾಗಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಯಿತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.