ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಕಷ್ಟದ ಪರಿಸ್ಥಿತಿಯನ್ನು, ಸವಾಲನ್ನು ನಿಭಾಯಿಸುವ ಖ್ಯಾತಿಯನ್ನು ಗಳಿಸಿದ್ದಾರೆ. ವಿಶೇಷವಾಗಿ ಆಸೀಸ್ ವಿರುದ್ಧ ಆಕ್ರಮಣಕಾರಿ ಮನೋಭಾವಕ್ಕೆ ಹೆಸರಾದ ಕೊಹ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದಲ್ಲದೇ ಯಾವುದೇ ಸ್ಲೆಡ್ಜಿಂಗ್‌ಗೆ ಅವಕಾಶ ನೀಡುತ್ತಿರಲಿಲ್ಲ.
ಇಂತಹ ಒಂದು ಉದಾಹರಣೆಯಲ್ಲಿ ಕಳೆದ ವರ್ಷ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಸ್ಟೀವ್ ಸ್ಮಿತ್ ಮತ್ತು ರೋಹಿತ್ ಶರ್ಮಾ ನಡುವೆ ಬಿಸಿ ಮಾತಿನ ಚಕಮಕಿ ನಡೆದಿತ್ತು. ರೋಹಿತ್ ಸ್ಟೀವ್ ಸ್ಮಿತ್ ವಿರುದ್ಧ ಅಪೀಲು ಮಾಡಿದಾಗ ಈ ಚಕಮಕಿ ನಡೆಯಿತು.
ಸ್ಮಿತ್‌ಗೆ ಈ ಅಪೀಲು ರುಚಿಸದೇ ರೋಹಿತ್‌ಗೆ ಏನನ್ನೋ ಹೇಳಿದಾಗ ಕೊಹ್ಲಿ ಸ್ಮಿತ್ ಅವರತ್ತ ಧಾವಿಸಿ, ಪ್ರತಿಯೊಬ್ಬರ ಜತೆ ನಿಮ್ಮ ವಿವಾದ ಇರುತ್ತದೆ. ನಿಮ್ಮ ಮಿತಿಯಲ್ಲಿ ಇರಿ ಎಂದು ಎಚ್ಚರಿಸಿದರು. ಆಶ್ಚರ್ಯಕರವೆಂದರೆ ಡೇವಿಡ್ ವಾರ್ನರ್ ಈ ವಿಷಯ ಬಗೆಹರಿಸಲು ಮಧ್ಯ ಪ್ರವೇಶಿಸಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.