Select Your Language

Notifications

webdunia
webdunia
webdunia
webdunia

ಲೋಕೇಶ್ ರಾಹುಲ್ ಅರ್ಧಶತಕ ವ್ಯರ್ಥ: ರಾಯಲ್ ವಿರುದ್ಧ ಮುಂಬೈಗೆ ಗೆಲುವು

ಲೋಕೇಶ್ ರಾಹುಲ್ ಅರ್ಧಶತಕ ವ್ಯರ್ಥ: ರಾಯಲ್ ವಿರುದ್ಧ ಮುಂಬೈಗೆ ಗೆಲುವು
ಬೆಂಗಳೂರು: , ಗುರುವಾರ, 12 ಮೇ 2016 (11:34 IST)
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ನ 151 ರನ್ ಸ್ಕೋರನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಅಂಬಾಟಿ ರಾಯಿಡು ಅವರ 44 ರನ್ ಮತ್ತು ಕೀರನ್ ಪೋಲಾರ್ಡ್ ಅವರ 19 ಎಸೆತಗಳಲ್ಲಿ 35 ಮತ್ತು ಬಟ್ಲರ್ 11 ಎಸೆತಗಳಲ್ಲಿ 29 ರನ್ ನೆರವಿನಿಂದ 18.4 ಓವರುಗಳಲ್ಲಿ ಗೆಲುವಿನ ಗಡಿಯನ್ನು ದಾಟಿದೆ.

ಒಂದು ಹಂತದಲ್ಲಿ ಮುಂಬೈ ಇಂಡಿಯನ್ಸ್ 16 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿದ್ದರು. ಮುಂಬೈ ಗೆಲ್ಲುವುದಕ್ಕೆ 4 ಓವರುಗಳಲ್ಲಿ 44 ರನ್ ಅಗತ್ಯವಿತ್ತು. ರಾಯಲ್‌ ಕಠಿಣ ಬೌಲಿಂಗ್ ಪ್ರದರ್ಶನ ನೀಡಿದ್ದರೆ ಗೆಲ್ಲುವ ಅವಕಾಶವಿತ್ತು. ಆದರೆ 18ನೇ ಓವರಿನಲ್ಲಿ 25 ರನ್ ಕೊಟ್ಟಿದ್ದು ರಾಯಲ್ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಜೋರ್ಡಾನ್ ಬೌಲಿಂಗ್‌ನಲ್ಲಿ ಬಟ್ಲರ್ 3 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಮೊದಲಿಗೆ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಪರ ಕೊಹ್ಲಿ, ಡಿವಿಲಿಯರ್ಸ್, ಕ್ರಿಸ್ ಗೇಲ್ ಆರಂಭದಲ್ಲೇ ಔಟಾದ ಬಳಿಕ ಲೋಕೇಶ್ ರಾಹುಲ್ ಮತ್ತು ಸಚಿನ್ ಬೇಬಿ ಇನ್ನಿಂಗ್ಸ್ ಕಟ್ಟಿದರು. ಲೋಕೇಶ್ ರಾಹುಲ್ 53 ಎಸೆತಗಳಲ್ಲಿ 68 ರನ್ ಸಿಡಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಲೋಕೇಶ್ ರಾಹುಲ್ ಭರ್ಜರಿ 68: ಆರ್‌ಸಿಬಿ 152 ರನ್