Select Your Language

Notifications

webdunia
webdunia
webdunia
webdunia

ಲೋಕೇಶ್ ರಾಹುಲ್ ಭರ್ಜರಿ 68: ಆರ್‌ಸಿಬಿ 152 ರನ್

lokesh rahul
ಬೆಂಗಳೂರು: , ಬುಧವಾರ, 11 ಮೇ 2016 (21:43 IST)
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು  20 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು ರನ್ ಸವಾಲನ್ನು ಒಡ್ಡಿದೆ. ರಾಯಲ್ ಪರ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದರಿಂದ ಸಂಕಷ್ಟದಲ್ಲಿ ಸಿಲುಕಿತ್ತು.

 ವಿರಾಟ್ ಕೊಹ್ಲಿ ಅವರು ಹರ್ಭಜನ್ ಬೌಲಿಂಗ್‌ನಲ್ಲಿ ಮೆಕ್‌ಕ್ಲೆನಾಗನ್‌‌ಗೆ ಕ್ಯಾಚಿತ್ತು ಔಟಾದರು. ಕ್ರಿಸ್ ಗೇಲ್ ಸೌತೀ ಬೌಲಿಂಗ್‌ನಲ್ಲಿ ರೋಹಿತ್‌ಗೆ ಕ್ಯಾಚಿತ್ತು ಔಟಾದರು. ಬಳಿಕ ಆಡಲಿಳಿದ ಡಿ ವಿಲಿಯರ್ಸ್ ಕೂಡ ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲದೇ 24 ರನ್ ಮಾಡಿ ಔಟಾದರು. ಆದರೆ ಕರ್ನಾಟಕದ ಆಟಗಾರ ಲೋಕೇಶ್ ರಾಹುಲ್ ಮತ್ತು ಸಚಿನ್ ಬೇಬಿ ಉತ್ತಮ ಜತೆಯಾಟದ ಮೂಲಕ ಇನ್ನಿಂಗ್ಸ್ ಕಟ್ಟಿದರು.

ಲೋಕೇಶ್ ರಾಹುಲ್ ಅವರ 52 ಎಸೆತಗಳಲ್ಲಿ ಅಜೇಯ 66 ರನ್ ಮತ್ತು ಸಚಿನ್ ಬೇಬಿ ಅವರ 13 ಎಸೆತಗಳಲ್ಲಿ ಅಜೇಯ 25 ರನ್ ನೆರವಿನಿಂದ ಆರ್‌‍ಸಿಬಿ ಸ್ಕೋರನ್ನು ಮುಂದೊಕ್ಕೊಯ್ದರು. ಆರ್‌ಸಿಬಿ  20 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 151 ರನ್ ಸವಾಲನ್ನು ಒಡ್ಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ಹೊಸ ಐಪಿಎಲ್ ತಂಡಗಳ ತದ್ವಿರುದ್ಧ ಕಥೆಗಳು