ಕ್ರುನಾಲ್ ಪಾಂಡ್ಯಾ ಅವರ 37 ಎಸೆತಗಳಲ್ಲಿ 86 ರನ್ ಮತ್ತು ಬೌಲಿಂಗ್‌ನಲ್ಲಿ 2 ವಿಕೆಟ್‌ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 80 ರನ್ ಅಂತರದಿಂದ ಸೋಲಿಸಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಕ್ರುನಾಲ್ ಪಾಂಡ್ಯ ಮಾರ್ಟಿನ್ ಗುಪ್ಟಿಲ್(48) ಜತೆಯಾಟದಲ್ಲಿ 98 ರನ್ ಕಲೆಹಾಕಿದ್ದು, ಮುಂಬೈ ಇಂಡಿಯನ್ಸ್ ತಂಡವನ್ನು 206 ರನ್ ಗಳಿಸುವಲ್ಲಿ ನೆರವಾದರು.
ಮುಂಬೈ ಸ್ಥಿರವಾದ ಆರಂಭದ ನಂತರ ರೋಹಿತ್ ಶರ್ಮಾ(31) ವಿಕೆಟ್ ಕಳೆದುಕೊಂಡಿತು. ಪಾಂಡ್ಯ ಸಿಡಿಲಬ್ಬರದ ಆಟವಾಡಿ ಎಸೆತಗಳನ್ನು ಬೌಂಡರಿಗೆ ಅಟ್ಟಿದರು. ಎಡಗೈ ಆಟಗಾರ ಅರ್ಧ ಡಜನ್ ಸಿಕ್ಸರ್‌ಗಳನ್ನು ಮತ್ತು ಏಳು ಬೌಂಡರಿಗಳನ್ನು ಬಾರಿಸಿ ಕ್ರಿಸ್ ಮಾರಿಸ್ ಅವರಿಗೆ ಬೌಲ್ಡ್ ಆದರು.
ಬಳಿಕ ಮುಂಬೈ ಬೌಲರ್ಸ್ ಡೇರ್ ಡೆವಿಲ್ಸ್ ತಂಡವನ್ನು 19.1 ಓವರುಗಳಲ್ಲಿ ಆಲೌಟ್ ಮಾಡುವ ಮೂಲಕ ಮನೋಜ್ಞ ಪ್ರದರ್ಶನ ನೀಡಿದರು. ಮುಂಬೈ ಇಂಡಿಯನ್ಸ್ ಪರ ಜಸ್‌ಪ್ರೀತ್ ಬುಮ್ರಾ 3 ವಿಕೆಟ್ ಮತ್ತು ಕ್ರುನಾಲ್ ಪಾಂಡ್ಯ 2 ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ