Select Your Language

Notifications

webdunia
webdunia
webdunia
webdunia

ಮೂರು ಶತಕ ಸಿಡಿಸಿ ಅತ್ಯಧಿಕ ರನ್ ದಾಖಲೆ ಮುರಿದ ಕೊಹ್ಲಿ

ಮೂರು ಶತಕ ಸಿಡಿಸಿ ಅತ್ಯಧಿಕ ರನ್ ದಾಖಲೆ ಮುರಿದ ಕೊಹ್ಲಿ
ನವದೆಹಲಿ : , ಶನಿವಾರ, 14 ಮೇ 2016 (20:18 IST)
ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ರಾಬಿನ್ ಉತ್ತಪ್ಪ ಅವರ ಭಾರತೀಯ ಬ್ಯಾಟ್ಸ್‌ಮನ್ ಐಪಿಎಲ್‌ ಏಕೈಕ ಸೀಸನ್‌ನಲ್ಲಿ ಅತೀ ಹೆಚ್ಚು ರನ್ ದಾಖಲೆಯನ್ನು ಮುರಿದಿದ್ದಾರೆ. ಕೊಹ್ಲಿಗೆ ಈ ದಾಖಲೆ ಮುರಿಯಲು ಕೇವಲ 11 ಇನ್ನಿಂಗ್ಸ್‌ಗಳು ಸಾಕಾಗಿದೆ. ಉತ್ತಪ್ಪಾ 5  2ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಗಿಂತ 5 ಇನ್ನಿಂಗ್ಸ್‌ಗಳು ಕಡಿಮೆಯಾಗಿದೆ.

 ಇಂದು 55 ಎಸೆತಗಳಲ್ಲಿ ಬಿರುಸಿನ 109 ರನ್ ಸಿಡಿಸುವ ಮೂಲಕ ಏಕಮಾತ್ರ ಐಪಿಎಲ್ ಪಂದ್ಯಾವಳಿಯಲ್ಲಿ ಮೂರು ಶತಕಗಳನ್ನು ಸಿಡಿಸಿದ ಪ್ರಥಮ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 
 
ಕೊಹ್ಲಿ ಉತ್ತಪ್ಪ ಟ್ಯಾಲಿಯಾದ 660 ರನ್ ಹಿಂದಿಕ್ಕಿ ಮುಂದಕ್ಕೆ ಸಾಗಿದರು. ಈ ಪಂದ್ಯಾವಳಿಯಲ್ಲಿ ಅವರ ಸ್ಕೋರು ಹೀಗಿದೆ, 75, 79, 33, 80, 100 ನಾಟೌಟ್, 14, 52, 108, 20, 7 ಮತ್ತು 109 ರನ್.
 
 ಆರ್‌‌ಸಿಬಿ ಪ್ಲೇಆಫ್ ಹಂತ ಪ್ರವೇಶಕ್ಕೆ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದ್ದು, ಇಂದು ನಡೆದ ಪಂದ್ಯದಲ್ಲಿ ಎರಡನೇ ವಿಕೆಟ್‌ಗೆ ಕೊಹ್ಲಿ ಮತ್ತು ಡಿ ವಿಲಿಯರ್ಸ್ 229 ರನ್ ಜತೆಯಾಟವಾಡಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ, ಡಿ ವಿಲಿಯರ್ಸ್ ಶತಕ: ಗುಜರಾತ್ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್