ರೋಹಿತ್ ಶರ್ಮಾ ಆರೋಗ್ಯದ ಬಗ್ಗೆ ಲೇಟೆಸ್ಟ್ ಸುಳಿವು ಕೊಟ್ಟ ಮುಂಬೈ ಇಂಡಿಯನ್ಸ್

ಗುರುವಾರ, 11 ಏಪ್ರಿಲ್ 2019 (08:58 IST)
ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಐಪಿಎಲ್ ಆಡುವಾಗ ಗಾಯಗೊಂಡ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಗಾಯದ ಲೇಟೆಸ್ಟ್ ಮಾಹಿತಿಯನ್ನು ಮುಂಬೈ ಇಂಡಿಯನ್ಸ್ ನೀಡಿದೆ.


ರೋಹಿತ್ ಗಾಯಗೊಂಡಿರುವುದರಿಂದ ಅವರು ವಿಶ್ವಕಪ್ ನಲ್ಲಿ ಆಡಲು ಫಿಟ್ ಆಗುತ್ತಾರೋ ಇಲ್ಲವೋ, ಮುಂಬೈ ಇಂಡಿಯನ್ಸ್ ಉಳಿದ ಪಂದ್ಯಗಳಿಗೆ ಲಭ್ಯರಾಗದೇ ಹೋದರೆ ಎಂದೆಲ್ಲಾ ಅಭಿಮಾನಿಗಳು ಆತಂಕಗೊಂಡಿದ್ದರು.

 ಆದರೆ ಇದೀಗ ಸಣ್ಣ ವಿಡಿಯೋ ತುಣುಕು ಮೂಲಕ ರೋಹಿತ್ ಆರೋಗ್ಯದ ಬಗ್ಗೆ ಮುಂಬೈ ಇಂಡಿಯನ್ಸ್ ಸುಳಿವು ನೀಡಿದೆ. ರೋಹಿತ್ ನಾನು ಚೆನ್ನಾಗಿಯೇ ಇದ್ದೇನೆ ಎಂಬಂತೆ ಸನ್ನೆ ಮಾಡುವ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ. ಇದು ರೋಹಿತ್ ಅಭಿಮಾನಿಗಳು ಸ್ವಲ್ಪ ಮಟ್ಟಿಗೆ ನಿರಾಳರಾಗುವಂತೆ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಐಪಿಎಲ್ ಆಡುತ್ತಿರುವ ಆರ್ ಸಿಬಿ ಆಟಗಾರ ಪಾರ್ಥಿವ್ ಪಟೇಲ್ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ