Publish Date: Wed, 10 Apr 2019 (07:32 IST)
Updated Date: Wed, 10 Apr 2019 (07:34 IST)
ಮುಂಬೈ: ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತು ಸಹಾಯಕ ಸಿಬ್ಬಂದಿಗಳ ಒಪ್ಪಂದ ಮುಗಿಯಲಿದೆ. ಆದರೆ ವಿಶ್ವಕಪ್ ಗೂ ಮೊದಲು ಕೋಚ್ ಬಳಗಕ್ಕೆ ಬಿಸಿಸಿಐ ಬಂಪರ್ ಗಿಫ್ಟ್ ನೀಡಲು ಮುಂದಾಗಿದೆ ಎನ್ನಲಾಗಿದೆ.
ಅನಿಲ್ ಕುಂಬ್ಳೆ ಬಳಿಕ ಟೀಂ ಇಂಡಿಯಾ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ರವಿಶಾಸ್ತ್ರಿ ಮತ್ತು ಭರತ್ ಅರುಣ್ ಜತೆಗೆ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಗೂ ಒಪ್ಪಂದ ಮುಂದುವರಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.
ವಿಶ್ವಕಪ್ ಬಳಿಕ ವೆಸ್ಟ್ ಇಂಡೀಸ್ ಸರಣಿ ನಡೆಯಲಿದ್ದು, ಆ ಸಂದರ್ಭದಲ್ಲಿಯೂ ತಂಡದ ಜತೆಗಿರಲು ಸಹಾಯಕ ಸಿಬ್ಬಂದಿಗಳಿಗೆ ಈ ಮೂಲಕ ಅವಕಾಶ ಸಿಗಲಿದೆ. ರವಿಶಾಸ್ತ್ರಿ ಮತ್ತು ಸಹಾಯಕ ಕೋಚ್ ಗಳ ಕಾರ್ಯವೈಖರಿ ಬಿಸಿಸಿಐಗೆ ತೃಪ್ತಿ ನೀಡಿದೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಈ ಆಫರ್ ಸಿಗುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ