ಚೆನ್ನೈ: 1983ರ ಭಾರತ ವಿಶ್ವ ಕಪ್ ವಿಜೇತ ತಂಡವನ್ನು ಕುರಿತ ಹಿಂದಿ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಲೆಜೆಂಡರಿ ಕ್ರಿಕೆಟರ್ ಕಪಿಲ್ ದೇವ್, ವಿಜಯದತ್ತ ಪ್ರಯಾಣವು ಸ್ಫೂರ್ತಿಯ ಕಥೆಯಾಗಿದ್ದು ಅದನ್ನು ಹೇಳಬೇಕಾಗಿದೆ ಎಂದು ತಿಳಿಸಿದರು. ಸೆಲಿಬ್ರಿಟಿ ಕ್ರಿಕೆಟ್ ಲೀಗ್(ಸಿಸಿಎಲ್) ಸಂಸ್ಥಾಪಕ ವಿಷ್ಣು ಇಂದುರಿ ಇನ್ನೂ ಹೆಸರಿಡದ ಚಿತ್ರಕ್ಕೆ ಫ್ಯಾಂಟಮ್ ಫಿಲ್ಮ್ಸ್ ಜತೆ ಕೈಗೂಡಿಸಿದ್ದು, 2017ರ ಮಾರ್ಚ್‌ನಲ್ಲಿ ಬೆಳ್ಳಿತೆರೆಯಲ್ಲಿ ಬರಲಿದೆ.
ನಿರ್ಮಾಪಕರು 1983ರ ಕ್ರಿಕೆಟ್ ತಂಡದ ಜತೆ ಒಡಂಬಡಿಕೆಗೆ ಸಹಿ ಹಾಕಿದ್ದು, ಭಾರತದ ಮೊದಲ ಕ್ರಿಕೆಟ್ ವಿಶ್ವಕಪ್ ಗೆಲುವಿನ ಅವರ ಪ್ರಯಾಣದ ಅಧಿಕೃತ ಆತ್ಮಕಥನವನ್ನು ಬಿಚ್ಚಿಡಲಿದ್ದಾರೆ.
ಈ ಎಂಒಯು ಪ್ರಕಾರ ಆಟಗಾರರ ವಾಸ್ತವ ಹೆಸರನ್ನು ಮತ್ತು ಅವರ ಜೀವನದ ನೈಜ ಘಟನೆಗಳನ್ನು ಬಳಸಿಕೊಳ್ಳಲಿದ್ದಾರೆ. 1983ರ ತಂಡದ ಪ್ರಯಾಣವು ಸ್ಫೂರ್ತಿಯ ಕತೆಯಾಗಿದ್ದು, ಜಗತ್ತು ಏನೇ ಚಿಂತಿಸಲಿ, ಯಾವುದೇ ಒಂದು ಗುರಿ ಸಾಧನೆಗೆ ಶ್ರಮಪಟ್ಟರೆ ಅದನ್ನು ಸಾಧಿಸಬಹುದೆಂದು ಸಾಬೀತು ಮಾಡಿದೆ.
ನಾವು 1983ರ ಚಿತ್ರವನ್ನು ತಯಾರಿಸಲು ಪುಳುಕಿತರಾಗಿದ್ದು, ಇದು ನಮ್ಮ ಹೆಗಲಿನ ಮೇಲಿರುವ ದೊಡ್ಡ ಜವಾಬ್ದಾರಿಯಾಗಿದೆ ಎಂದು ಇಂದೂರಿ ಮತ್ತು ಫಾಂಟಮ್ ಫಿಲಮ್ಸ್ ಮಧು ಮಂಟೇನಾ ತಿಳಿಸಿದರು. ಭಾರತ 1983ರಲ್ಲಿ ಹಾಲಿ ಚಾಂಪಿಯನ್ನರಾಗಿದ್ದ ವೆಸ್ಟ್ ಇಂಡೀಸ್ ತಂಡವನ್ನು ಫೈನಲ್‌ನಲ್ಲಿ ಸೋಲಿಸಿ ಕ್ರಿಕೆಟ್ ವಿಶ್ವ ಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.