ಬಿಸಿಸಿಐ ಪದಾಧಿಕಾರಿಗಳಲ್ಲಿ 70 ವರ್ಷ ವಯಸ್ಸಿನ ಗಡಿ ದಾಟಿದವರಿಗೆ ಕೊಕ್ ನೀಡಬೇಕೆಂಬ ಲೋಧಾ ಸಮಿತಿಯ ವರದಿಯನ್ನು ಒಪ್ಪಿಕೊಂಡ ಸುಪ್ರೀಂಕೋರ್ಟ್ ತೀರ್ಪಿನಿಂದ ಹಿರಿಯ ಕ್ರಿಕೆಟ್ ಆಡಳಿತಗಾರರಾದ ಶರದ್ ಪವಾರ್, ಎನ್. ಶ್ರೀನಿವಾಸನ್ ಮತ್ತು ನಿರಂಜನ್ ಶಾಹ್ ಮುಂತಾದವರು ಮನೆಗೆ ತೆರಳಬೇಕಾಗಿದೆ.
ಲೋಧಾ ತೀರ್ಪಿನ ಅನ್ವಯ ಸುಪ್ರೀಂಕೋರ್ಟ್ ತೀರ್ಪಿನಿಂದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕುರ್(ಹಿಮಾಚಲ ಪ್ರದೇಶ), ಕಾರ್ಯದರ್ಶಿ ಅಜಯ್ ಶಿರ್ಕೆ( ಮಹಾರಾಷ್ಟ್ರ), ಕೋಶಾಧಿಕಾರಿ ಅನಿರುಧ್ ಚೌಧರಿ(ಹರ್ಯಾಣ) ಮತ್ತು ಜಂಟಿ ಕಾರ್ಯದರ್ಶಿ ಅಮಿತಾಬ್ ಚೌಧರಿ(ಜಾರ್ಖಂಡ್) ಆಯಾ ರಾಜ್ಯಸಂಸ್ಥೆಗಳಲ್ಲಿ ಹಿತಾಸಕ್ತಿ ಸಂಘರ್ಷ ತಪ್ಪಿಸುವುದಕ್ಕಾಗಿ ರಾಜೀನಾಮೆ ನೀಡಬೇಕಾಗಿದೆ.
ಮಾಜಿ ಬಿಸಿಸಿಐ ಅಧ್ಯಕ್ಷ ಪವಾರ್ ಅವರಿಗೆ 75 ವರ್ಷಗಳಾಗಿದ್ದು, ತಮಿಳುನಾಡಿನ ಶ್ರೀನಿವಾಸನ್ ಅವರಿಗೆ 71 ವರ್ಷಗಳಾಗಿವೆ. ಇಬ್ಬರೂ ಮುಂಬೈ ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ