Select Your Language

Notifications

webdunia
webdunia
webdunia
webdunia

ಪತ್ನಿಗೆ ಇನ್ನೊಂದು ಮದುವೆಯಾಗಿರುವ ವಿಚಾರ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಗೊತ್ತೇ ಇರಲಿಲ್ಲವಂತೆ!

ಪತ್ನಿಗೆ ಇನ್ನೊಂದು ಮದುವೆಯಾಗಿರುವ ವಿಚಾರ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಗೊತ್ತೇ ಇರಲಿಲ್ಲವಂತೆ!
ಕೋಲ್ಕೊತ್ತಾ , ಗುರುವಾರ, 15 ಮಾರ್ಚ್ 2018 (12:21 IST)
ಕೋಲ್ಕೊತ್ತಾ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಪತ್ನಿ ಹಸೀನ್ ಜಹಾನ್ ನಡುವಿನ ದಾಂಪತ್ಯ ಕಲಹ ತಾರಕಕ್ಕೇರಿದೆ. ಶಮಿ ಮೇಲೆ ಗೃಹ ಹಿಂಸೆ ಹೊರಿಸಿದ್ದ ಹಸೀನ್ ಗೆ ಈ ಮೊದಲೇ ಮದುವೆಯಾಗಿ ವಿಚ್ಛೇದನವಾಗಿತ್ತು.

ಈ ಮದುವೆಯಿಂದ ಹಸೀನ್ ಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಈ ವಿಚಾರ ಶಮಿಗೆ ಗೊತ್ತೇ ಇರಲಿಲ್ಲವಂತೆ. ಪತ್ನಿಗೆ ಮೊದಲ ಮದುವೆಯಾದ ವಿಚಾರ ತನಗೆ ಗೊತ್ತೇ ಇರಲಿಲ್ಲ. ಈಗಷ್ಟೇ ಗೊತ್ತಾಗುತ್ತಿದೆ ಎಂದು ಶಮಿ ಆರೋಪಿಸಿದ್ದಾರೆ.

ಮೊದಲ ಪತಿಯ ಮಕ್ಕಳನ್ನು ತನ್ನ ತೀರಿಕೊಂಡ ಸಹೋದರಿಯ ಮಕ್ಕಳು ಎಂದೇ ಶಮಿಗೆ ಪರಿಚಯಿಸಿದ್ದರಂತೆ. ತನ್ನ ಪತ್ನಿಗೆ ಯಾರೋ ಬ್ರೈನ್ ವಾಷ್ ಮಾಡಿ ಎಲ್ಲಾ ಆರೋಪ ಹೊರಿಸುತ್ತಿದ್ದಾರೆ ಎಂದು ಶಮಿ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ಶರ್ಮಾ ಗರ್ಭಿಣಿಯೇ? ವೈರಲ್ ಆಯ್ತು ವಿರಾಟ್ ಕೊಹ್ಲಿ ಮಾಡಿದ ಟ್ವೀಟ್!