Publish Date: Thu, 15 Mar 2018 (09:17 IST)
Updated Date: Thu, 15 Mar 2018 (09:19 IST)
ಕೋಲ್ಕೊತ್ತಾ: ಪತಿ ಮೊಹಮ್ಮದ್ ಶಮಿ ವಿರುದ್ಧ ಗೃಹ ಹಿಂಸೆ ಪ್ರಕರಣ ದಾಖಲಿಸಿದ್ದ ಪತ್ನಿ ಹಸೀನ್ ಜಹಾನ್ ವಿರುದ್ಧ ಹೊಸದೊಂದು ಮಾಹಿತಿ ಹೊರಬಿದ್ದಿದೆ.
ಶಮಿ ಪತ್ನಿ ಹಸೀನ್ ಗೆ ಈ ಮೊದಲು ಮದುವೆಯಾಗಿತ್ತು. ಪಶ್ಚಿಮ ಬಂಗಾಲದ ಸೈಫುದ್ದೀನ್ ಎಂಬ ಮಧ್ಯಮ ವರ್ಗದ ವ್ಯಕ್ತಿಯೊಂದಿಗೆ ಹಸೀನ್ ಗೆ ಈ ಮೊದಲು ಮದುವೆಯಾಗಿತ್ತು. ಈ ಮದುವೆಯಿಂದ ಹಸೀನ್ ಗೆ ಎರಡು ಮಕ್ಕಳಾಗಿದ್ದರು. ಆದರೆ ಮತ್ತೆ ವಿದ್ಯಾಭ್ಯಾಸ ಮುಂದುವರಿಸಲು ಹಠ ಹಿಡಿದಿದ್ದ ಕಾರಣಕ್ಕೆ ಮೊದಲ ಪತಿಗೆ ಹಸೀನ್ ವಿಚ್ಛೇದನ ನೀಡಿದ್ದರು ಎಂದು ಸ್ವತಃ ಸೈಪುದ್ದೀನ್ ಬಹಿರಂಗಪಡಿಸಿದ್ದಾರೆ.
ಶಮಿ ಜತೆ ಮದುವೆಯಾಗುವವರೆಗೂ ಆ ಮಕ್ಕಳಿಬ್ಬರೂ ತಾಯಿ ಜತೆ ವಾಸಿಸುತ್ತಿದ್ದರು. ಆದರೆ ಎರಡನೇ ಮದುವೆ ಬಳಿಕ ಅಪ್ಪನೊಂದಿಗೆ ನೆಲೆಸಿದ್ದಾರೆ. ಈಗಲೂ ರಜಾ ದಿನಗಳಲ್ಲಿ ಅಮ್ಮನ ಜತೆ ಮಕ್ಕಳು ಕೂಡಿಕೊಳ್ಳುತ್ತಾರಂತೆ. ಇದೀಗ ಸೈಫುದ್ದೀನ್ ಮತ್ತು ಮಕ್ಕಳು ಹಸೀನ್ ವೈವಾಹಿಕ ಜೀವನ ಸರಿಯಾಗಲಿ ಎಂದು ಹಾರೈಸುತ್ತಿದ್ದಾರೆ.
ಇನ್ನೊಂದು ಮೂಲದ ಪ್ರಕಾರ ಶಮಿ ಮತ್ತು ಪತ್ನಿ ನಡುವೆ ಆಸ್ತಿಗಾಗಿ ಈ ಬಿರುಕು ಏರ್ಪಟ್ಟಿದೆ ಎನ್ನಲಾಗಿದೆ. 15 ಕೋಟಿ ರೂ. ಬೆಲೆಯ ನಿವೇಶನದ ಒಡೆತನಕ್ಕಾಗಿ ಇವರಿಬ್ಬರ ನಡುವೆ ವೈಮನಸ್ಯ ಏರ್ಪಟ್ಟಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೆ, ಹಸೀನ್ ತಂದೆಯೇ ಶಮಿ ಒಳ್ಳೆಯ ಹುಡುಗ. ಇವರಿಬ್ಬರ ನಡುವೆ ಯಾಕೆ ವೈಮನಸ್ಯ ಏರ್ಪಟ್ಟಿತು ಎಂಬುದು ಅವರಿಬ್ಬರಿಗೇ ಗೊತ್ತು ಎಂದಿರುವುದನ್ನು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ