Webdunia - Bharat's app for daily news and videos

Install App

ಈ ತಾಕತ್ತು ಇರೋದು ಟೀಂ ಇಂಡಿಯಾಗೆ ಮಾತ್ರ: ಮಿಚೆಲ್ ಸ್ಟಾರ್ಕ್ ಹೊಗಳಿಕೆ

Krishnaveni K
ಶುಕ್ರವಾರ, 14 ಮಾರ್ಚ್ 2025 (11:01 IST)
Photo Credit: X
ಮುಂಬೈ: ಏಕಕಾಲಕ್ಕೆ ಟೆಸ್ಟ್, ಏಕದಿನ ಮತ್ತು ಟಿ20 ಫಾರ್ಮ್ಯಾಟ್ ನಲ್ಲಿ ಒಂದೇ ದಿನ ಬೇರೆ ಬೇರೆ ತಂಡಗಳನ್ನು ಆಡಿಸುವ ತಾಕತ್ತು ಇರೋದು ಟೀಂ ಇಂಡಿಯಾಗೆ ಮಾತ್ರ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ ಹೊಗಳಿದ್ದಾರೆ.

‘ನನ್ನ ಪ್ರಕಾರ ಟೀಂ ಇಂಡಿಯಾಗೆ ಮಾತ್ರವೇ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದಂತಹ ತಂಡದ ವಿರುದ್ಧ ಒಂದೇ ದಿನ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯವನ್ನು ಆಡಿ ಗೆಲ್ಲುವ ತಾಕತ್ತು ಹೊಂದಿದೆ. ಭಾರತ ತಂಡ ಅಷ್ಟು ಪ್ರಬಲ ತಂಡ’ ಎಂದು ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.

ಐಪಿಎಲ್ ಆಡುವುದಕ್ಕಾಗಿ ಭಾರತದಲ್ಲಿರುವ ಮಿಚೆಲ್ ಸ್ಟಾರ್ಕ್ ಟೀಂ ಇಂಡಿಯಾವನ್ನು ಹಾಡಿಹೊಗಳಿದ್ದಾರೆ. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾಗೆ ಮಾತ್ರ ಒಂದೇ ತಾಣದಲ್ಲಿ ಆಡಿದ ಲಾಭ ಸಿಕ್ಕಿದೆ ಎಂಬ ಆಕ್ಷೇಪಗಳ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

‘ನಾವು ಸಂಪೂರ್ಣವಾಗಿ ಹಾಗೆ ಹೇಳಲು ಸಾಧ್ಯವಿಲ್ಲ. ಇತ್ತೀಚೆಗಿನ ದಿನಗಳಲ್ಲಿ ನಾವು ಫ್ರಾಂಚೈಸಿ ಕ್ರಿಕೆಟಿಗಾಗಿ ವಿಶ್ವದ ನಾನಾ ತಾಣಗಳಲ್ಲಿ ಆಡುವ ಅವಕಾಶ ನಮಗೆ ಸಿಗುತ್ತಿದೆ. ಆದರೆ ಭಾರತೀಯ ಕ್ರಿಕೆಟಿಗರು ವಿದೇಶ ಲೀಗ್ ನಲ್ಲಿ ಆಡುವುದಿಲ್ಲ. ಹೀಗಾಗಿ ದುಬೈ ತಾಣದಲ್ಲಿ ಭಾರತಕ್ಕೆ ಅನುಕೂಲವಾಗುವ ಸಾಧ್ಯತೆಯಿರಲಿಲ್ಲ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಆರ್ ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಮಹಿಳೆಗೆ ವಂಚನೆ ಮಾಡಿದ ಆರೋಪ

ರೋಹಿತ್ ಶರ್ಮಾ ಇದ್ದ ರೂಂಗೆ ಗರ್ಲ್ ಫ್ರೆಂಡ್ ಕರೆದಿದ್ದ ಶಿಖರ್ ಧವನ್

ಮುಂದಿನ ಸುದ್ದಿ
Show comments