ಹೈದರಾಬಾದ್: ಬುಧವಾರ ನಡೆದ ಮುಂಬೈ ಇಂಡಿಯನ್ಸ್ (ಎಂಐ) ಹಾಗೂ ಸನ್‌ರೈಸರ್ಸ್ ವಿರುದ್ಧದ ಪಂದ್ಯಾಟದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ.
ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡದ ಬ್ಯಾಟರ್ ಇಶಾನ್ ಕಿಶನ್ ಔಟಾದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನಿಂಗ್ಸ್‌ನ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಕಿಶನ್ ಔಟಾದರು. ದೀಪಕ್ ಚಾಹರ್ ಎಸೆತವನ್ನು ಲೆಗ್‌ಸೈಡ್‌ನತ್ತ ಬಾರಿಸಲು ಮುಂದಾದರು. ಆದರೆ, ಅದು ಸಾಧ್ಯವಾಗಲಿಲ್ಲ. ಚೆಂಡು ವಿಕೆಟ್‌ಕೀಪರ್ ರಿಯಾನ್ ರಿಕೆಲ್ಟನ್ ಕೈಸೇರಿತು.
ಈ ವೇಳೆ ಯಾರೊಬ್ಬರೂ ಔಟ್‌ಗಾಗಿ ಮನವಿ ಮಾಡಲಿಲ್ಲ. ಚಾಹರ್ ಮುಂದಿನ ಎಸೆತಕ್ಕಾಗಿ ಹೋಗುತ್ತಿದ್ದರು. ಆದರೆ, ಆನ್ ಫೀಲ್ಡ್ ಅಂಪೈರ್ ವಿನೋದ್ ಶೇಷನ್ ಗೊಂದಲದಲ್ಲಿಯೇ ಔಟ್ ನೀಡಲು ಮುಂದಾದರು.
ಇದನ್ನು ಗಮನಿಸಿದ ಚಾಹರ್, ವಿಕೆಟ್‌ಕೀಪರ್ ಕಡೆಗೆ ನೋಡಿ ಔಟ್ ಮನವಿ ಮಾಡಿದರು. ಈ ಬೆಳವಣಿಗೆ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸೇರಿದಂತೆ ಉಳಿದವರನ್ನೂ ಅಚ್ಚರಿಗೊಳಿಸಿತು.
ಇಷ್ಟೆಲ್ಲ ಆದರೂ, ಕಿಶನ್ ಡಿಆರ್‌ಎಸ್ ತೆಗೆದುಕೊಲ್ಲದೆ ನಗುತ್ತಲೇ ಪೆವಿಲಿಯನ್ ಕಡೆಗೆ ತೆರಳುತ್ತಾರೆ. 'ತಲೆ ನೇವರಿಸಿ' ಬೀಳ್ಕೊಟ್ಟರು.
ಅಲ್ಟ್ರಾಎಡ್ಜ್ ಪರಿಶೀಲನೆ ವೇಳೆ ಚೆಂಡು ಬ್ಯಾಟ್‌ಗೆ ತಾಗದಿರುವುದು ಸ್ಪಷ್ಟವಾಗಿತ್ತು. ಅದು ನೇರಪ್ರಸಾರವೂ ಆಯಿತು. ಅಷ್ಟರಲ್ಲಿ ಕಿಶನ್ ಬೌಂಡರಿ ಗೆರೆ ದಾಟಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇಶಾನ್ ಕಿಶಾನ್ ಅವರು ಔಟ್ ಆಗಿರುವುದಕ್ಕೆ ನೆಟ್ಟಿಗರಿಂದ ಭಾರೀ ಅನುಮಾನ ವ್ಯಕ್ತವಾಗಿದೆ.