ಮ್ಯಾಥ್ಯೂಸ್‌ಗೆ ಮತ್ತೊಮ್ಮೆ ಮರಳಿದ ನಾಯಕನ ಪಟ್ಟ...!!

ನಾಗಶ್ರೀ ಭಟ್
ಬುಧವಾರ, 10 ಜನವರಿ 2018 (18:39 IST)
ತಂಡದ ಹೀನಾಯ ಸೋಲುಗಳ ಬಳಿಕ ಶ್ರೀಲಂಕಾ ಕ್ರಿಕೆಟ್ ತಂಡದ ಅನುಭವಿ ಆಟಗಾರ ಆ್ಯಂಗಲೋ ಮ್ಯಾಥ್ಯೂಸ್ ಅವರು ತಮ್ಮ ನಾಯಕನ ಪಟ್ಟವನ್ನು ಬಿಟ್ಟುಕೊಟ್ಟಿದ್ದರು. ನಂತರದ ದಿನಗಳಲ್ಲಿ ಶ್ರೀಲಂಕಾ ತಂಡ ನಾಯಕನ ಸ್ಥಾನಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿತ್ತು. ಆದರೆ ಆ ಬದಲಾವಣೆಗಳು ಸಫಲವಾಗದೇ ಇರುವ ಕಾರಣ ಮತ್ತೆ ಏಕದಿನ ತಂಡದ ನಾಯಕನ ಸ್ಥಾನವನ್ನು ಮ್ಯಾಥ್ಯೂಸ್ ಅವರಿಗೆ ನೀಡಿದೆ ಎನ್ನಲಾಗಿದೆ.
2017 ರಲ್ಲಿ ಕ್ರಿಕೆಟ್ ರ‍್ಯಾಂಕಿಂಗ್‌‌ನಲ್ಲಿ ಕೆಳಗಿರುವ ತಂಡವೆಂದೇ ಕರೆಯಲ್ಪಡುವ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಎದುರಾದ ಹೀನಾಯ ಸೋಲಿನ ನಂತರ ಮ್ಯಾಥ್ಯೂಸ್ ಅವರಿಂದ ನಾಯಕನ ಪಟ್ಟವನ್ನು ಕ್ರಿಕೇಟ್ ಮಂಡಳಿ ಹಿಂಪಡೆದಿತ್ತು. ನಂತರ ಟೆಸ್ಟ್ ನಾಯಕನಾಗಿ ದಿನೇಶ್ ಚಾಂದಿಮಾಲ್ ಮತ್ತು ಏಕದಿನ ತಂಡಕ್ಕೆ ಉಪುಲ್ ತರಂಗ ಅವರನ್ನು ನೇಮಿಸಲಾಗಿತ್ತು. ನಂತರ ತಿಸರಾ ಪರೇರಾ ಅವರನ್ನು ಉಪುಲ್ ತರಂಗ ಅವರ ಬದಲು ನೇಮಕ ಮಾಡಲಾಗಿತ್ತು. ಆದರೆ ಇವರೂ ಸಹ ತಂಡವನ್ನು ಮುನ್ನಡೆಸುವಲ್ಲಿ ವೈಫಲ್ಯವನ್ನು ಕಂಡ ಕಾರಣ ಈಗ ಮತ್ತೆ ಮ್ಯಾಥ್ಯೂಸ್ ಮೊರೆ ಹೋಗಲಾಗಿದೆ.
 
ಕೇವಲ ಹೊಸಬರೇ ಹೆಚ್ಚಾಗಿರುವ ಶ್ರೀಲಂಕಾ ತಂಡದಲ್ಲಿ ಇರುವ ಕೆಲವೇ ಕೆಲವು ಅನುಭವಿ ಆಟಗಾರರಲ್ಲಿ ಮ್ಯಾಥ್ಯೂಸ್ ಒಬ್ಬರಾಗಿರುವುದರಿಂದ 2019 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌‌ವರೆಗೆ ಮ್ಯಾಥ್ಯೂಸ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ನಾನು ನಾಯಕನ ಸ್ಥಾನ ಬಿಟ್ಟುಕೊಟ್ಟಾಗ ಮತ್ತೆ ನಾಯಕನಾಗಬಹುದು ಎಂದುಕೊಂಡಿರಲಿಲ್ಲ ಎಂದು ಮ್ಯಾಥ್ಯೂಸ್ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಪಂಜಾಬ್‌ ವಿರುದ್ಧ ಗೆದ್ದು ಪ್ಲೇ–ಆಫ್‌ಗೆ ಲಗ್ಗೆ ಹಾಕಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

RCB VS PBKS: ಟಾಸ್‌ ಗೆದ್ದ ಪಂಜಾಬ್‌, ಬೌಲಿಂಗ್ ಆಯ್ಕೆ

ನನ್ನನ್ನು ಉತ್ತಮ ಮನುಷ್ಯನನ್ನಾಗಿ ಮಾಡಿದಳು: ಪತ್ನಿ ಅನುಷ್ಕಾ ತಂದ ಬದಲಾವಣೆ ಬಗ್ಗೆ ವಿರಾಟ್ ಕೊಹ್ಲಿ ಮಾತು

IPL 2026: ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿಗೆ ಇಂದು ಮಹತ್ವದ ಪಂದ್ಯ: ಗೆದ್ದರೆ ಪ್ಲೇಆಫ್‌ ಸ್ಥಾನ ಫಿಕ್ಸ್‌

ಈ ದಿನ ಹಸೆಮಣೆ ಏರಲಿದ್ದಾರಂತೆ ಹಾರ್ದಿಕ್ ಪಾಂಡ್ಯ, ಮಹಿಕಾ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments