ಮಾರ್ಲನ್ ಸ್ಯಾಮುಯಲ್ಸ್ ಆಸ್ಟ್ರೇಲಿಯಾ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ತಂಡ ನಾಲ್ಕು ವಿಕೆಟ್ ಜಯಗಳಿಸಲು ನೆರವಾದರು. ಸೇಂಟ್ ಕಿಟ್ಸ್‌ನ ವಾರ್ನರ್ ಪಾರ್ಕ್‌ನಲ್ಲಿ ನಡೆದ ತ್ರಿರಾಷ್ಟ್ರಗಳ ಸರಣಿಯ ಐದನೇ ಪಂದ್ಯದಲ್ಲಿ ಸ್ಯಾಮುಯಲ್ಸ್ ಅವರ ಅಮೋಘ 92 ರನ್ ಸ್ಕೋರ್ ಇನ್ನೂ 26 ಎಸೆತಗಳು ಇರುವಾಗಲೇ ಗುರಿಯನ್ನು ಮುಟ್ಟಲು ಸಾಧ್ಯವಾಯಿತು.
ಉಸ್ಮಾನ್ ಕ್ವಾಜಾ ಅವರ 98 ರನ್ ಮತ್ತು ಸ್ಟೀವ್ ಸ್ಮಿತ್ 74 ಹಾಗೂ ಬೈಲಿ 55 ಅವರ ಅರ್ಧಶತಕಗಳಿಂದ ಪ್ರವಾಸಿ ತಂಡ ಏಳು ವಿಕೆಟ್ ಕಳೆದುಕೊಂಡು 265 ರನ್ ಗಳಿಸಿತ್ತು. ವೆಸ್ಟ್ ಇಂಡೀಸ್ ಪರ ಜಾನ್ಸನ್ ಚಾರ್ಲ್ಸ್ 48 ರನ್ ಮತ್ತು ಬ್ರೇವೊ 39 ರನ್ ಗಳಿಸಿದರು. ಬ್ರೇವೊ ಔಟಾದ ಬಳಿಕ ಸ್ಯಾಮುಯಲ್ಸ್ ಮತ್ತು ರಾಮ್ಡಿನ್ 73 ರನ್ ಜತೆಯಾಟವಾಡಿದರು.
ಸ್ಯಾಮ್ಯುಯಲ್ಸ್ 92 ರನ್ ಸ್ಕೋರ್ ಮಾಡಿದ್ದಾಗ ವೇಡ್ ರನ್ ಔಟ್ ಮಾಡಿದರು. ಆಸ್ಟ್ರೇಲಿಯಾ ಪರ ಕೋಲ್ಟರ್ ನೈಲ್ ಮತ್ತು ಜಾಂಪಾ ತಲಾ 2 ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ