ಮಾಜಿ ನಾಯಕ ಮತ್ತು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಅನಿಲ್ ಕುಂಬ್ಲೆ ಅತೀ ಗಮನಸೆಳೆದ ಭಾರತದ ಕ್ರಿಕೆಟ್ ಟೀಂ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಕುಂಬ್ಳೆ ಅವರು ಅಭ್ಯರ್ಥಿಯಾಗಿರುವುದು ಆಸಕ್ತಿದಾಯಕವಾಗಿದ್ದು, ಅವರ ಸ್ಥಾನಮಾನದ ತೂಕದಿಂದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಮತ್ತು ಆಯ್ಕೆದಾರರ ಅಧ್ಯಕ್ಷ ಸಂದೀಪ್ ಪಾಟೀಲ್ ಅವರಿಗಿಂತ ಗುಣಮಟ್ಟದಲ್ಲಿ ಮೇಲಿದ್ದಾರೆ.
ಕುಂಬ್ಳೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದು ಈಗ ಹರಿದಾಡುತ್ತಿರುವ ದೊಡ್ಡ ಹೆಸರುಗಳಲ್ಲಿ ಒಂದಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು. ಕುಂಬ್ಳೆ ಕೋಚಿಂಗ್ ಅರ್ಹತೆ ಕುರಿತು ಕೇಳಿದಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಕ್ಕೆ ಅವರು ಮಾರ್ಗದರ್ಶಿಯಾಗಿದ್ದರು. ಅವರದ್ದು ಎತ್ತರದ ವ್ಯಕ್ತಿತ್ವವಾಗಿದ್ದು, ಪ್ರಸಕ್ತ ತಂಡದ ಪ್ರತಿಯೊಬ್ಬ ಆಟಗಾರ ಅವರ ಬಗ್ಗೆ ಗೌರವ ಹೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಕುಂಬ್ಳೆ 132 ಟೆಸ್ಟ್ ಪಂದ್ಯಗಳಿಂದ 619 ವಿಕೆಟ್‌ಗಳನ್ನು ಮತ್ತು 271 ಏಕದಿನ ಪಂದ್ಯಗಳಿಂದ 337 ವಿಕೆಟ್ ಕಬಳಿಸಿದ್ದಾರೆ ಮತ್ತು ವಿದೇಶದಲ್ಲಿ ಶತಕವೊಂದರಿಂದ 2506 ಟೆಸ್ಟ್ ಪಂದ್ಯದ ರನ್ ಸ್ಕೋರ್ ಮಾಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.