Select Your Language

Notifications

webdunia
webdunia
webdunia
webdunia

ಲಕ್ಷ ಬೆಲೆಬಾಳುವ ಬೈಕ್`ಗಳಿದ್ದರೂ ಈ ಸೆಕೆಂಡ್ ಹ್ಯಾಂಡ್ ಬೈಕ್ ಎಂದರೆ ಧೋನಿಗೆ ಎಲ್ಲಿಲ್ಲದ ಮೋಹ

ಲಕ್ಷ ಬೆಲೆಬಾಳುವ ಬೈಕ್`ಗಳಿದ್ದರೂ ಈ ಸೆಕೆಂಡ್ ಹ್ಯಾಂಡ್ ಬೈಕ್ ಎಂದರೆ ಧೋನಿಗೆ ಎಲ್ಲಿಲ್ಲದ ಮೋಹ
ರಾಂಚಿ , ಶುಕ್ರವಾರ, 7 ಜುಲೈ 2017 (17:47 IST)
ಮಹೇಂದ್ರ ಸಿಂಗ್ ಧೋನಿ ದೇಶ ಕಂಡ ಮಹಾನ್ ಕ್ರಿಕೆಟಿಗ ಎನ್ನುವ ಜೊತೆಗೆ ಅವರಿಗಿರುವ ಕಾರು ಮತ್ತು ಬೈಕ್ ಮೋಹದಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಾರೆ. ಹಾರ್ಲೆ ಡೇವಿಡ್ ಸನ್,  ಕಾನ್ಫೆಡರೇಟ್ ಹೆಲಿಕ್ಯಾಟ್`ನಂತಹ ದೊಡ್ಡ ದೊಡ್ಡ ಬೈಕ್`ಗಳು ಧೋನಿಯ ಬಳಿ ಇವೆ. ಆದರೂ ತಾವು ಮೊದಲು ಖರೀದಿಸಿದ ಯಮಹಾ ಆರ್ ಎಕ್ಸ್ 100 ಸೆಕೆಂಡ್ ಹ್ಯಾಂಡ್ ಬೈಕ್ ಬಗ್ಗೆ ಧೋನಿಗೆ ಎಲ್ಲಿಲ್ಲದ ಮೋಹ.

ಹೌದು, ಧೋನಿಗೆ ಈ ಬೈಕ್ ಎಮದರೆ ಒಂದು ರೀತಿ ಭಾವನಾತ್ಮಕ ಸಂಬಂಧವಿದೆ. 2003ರಲ್ಲಿ ರಣಜಿ ಆಡುತ್ತಿದ್ದಾಗ ಸ್ನೇಹಿತನೊಬ್ಬನಿಂದ 6000 ರೂ. ಕೊಟ್ಟು ಧೋನಿ ಈ ಬೈಕ್ ಖರೀದಿಸಿದ್ದಾರೆ. ಬಳಿಕ 25000 ರೂ. ಖರ್ಚು ಮಾಡಿ ಬೈಕ್ ರಿಪೇರಿ ಮಾಡಿಸಿದ್ದಾರೆ. ಈ ಬೈಕ್ ಖರೀದಿಸಿ ಒಂದೇ ವರ್ಷದಲ್ಲಿ ಧೋನಿ ಭವಿಷ್ಯವೇ ಬದಲಾಯಿತಂತೆ.

ಟೀಮ್ ಇಂಡಿಯಾಗೆ ಧೋನಿ ಎಂಟ್ರಿ: 2004ರಲ್ಲಿ ಧೋನಿ ಇಂಡಿಯಾ ಎ ಟೀಮ್`ಗೆ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್`ಮನ್ ಆಗಿ ಆಯ್ಕೆಯಾಗುತ್ತಾರೆ. ಅಲ್ಲಿಂದ ಧೋನಿ ತಿರುಗಿ ನೋಡಿದ್ದೇ ಇಲ್ಲ. ಻ದ್ಬುತ ಾಟದಿಂದ ಗಮನ ಸೆಳೆದ ಧೋನಿ ಟೀಮ್ ಇಂಡಿಯಾ ನಾಯಕನಾಗಿ ಭಾರತಕ್ಕೆ ವಿಶ್ವಕಪ್ ತಂದು ಕೊಟ್ಟರು. ಹೀಗಾಗಿಯೇ ಧೋನಿ ಇದನ್ನ ಲಕ್ಕಿ ಬೈಕ್ ಎಂದು ಈಗಳು ಇಟ್ಟುಕೊಂಡಿದ್ದಾರೆ.

ಧೋನಿ ರಾಂಚಿಗೆ ಭೇಟಿ ನೀಡಿದಾಗಲೆಲ್ಲ ಈ ಬೈಕ್ ಮೇಲೆ ಒಂದು ರೈಡ್ ಹೋಗ್ತಾರಂತೆ. ಪ್ರತೀ ಸಾರಿ ಏನಾದರೊಂದು ರಿಪೇರಿ ಮಾಡಿಸುತ್ತಾರಂತೆ. ತನ್ನ ಲಕ್ಕಿ ಬೈಕನ್ನ ಪ್ರತೀ ಸಾರಿ ಕಂಡೀಷನ್`ನಲ್ಲಿ ಇಟ್ಟುಕೊಳ್ಳುತ್ತಾರಂತೆ ಧೋನಿ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಶೇನ್ ವಾರ್ನ್ ಕಮ್ ಬ್ಯಾಕ್!?