Publish Date: Fri, 07 Jul 2017 (11:56 IST)
Updated Date: Fri, 07 Jul 2017 (11:59 IST)
ಮುಂಬೈ: ಮುಂದಿನ ಐಪಿಎಲ್ ಆವೃತ್ತಿಯಿಂದ ರಾಜಸ್ಥಾನ್ ರಾಯಲ್ಸ್ ತಂಡ ನಿಷೇಧದ ಶಿಕ್ಷೆ ಮುಗಿಸಿ ಕಣಕ್ಕೆ ಮರಳಲಿದೆ. ಇದರ ಬೆನ್ನಲ್ಲೇ ರಾಯಲ್ಸ್ ತಂಡಕ್ಕೆ ಸೇರಿಕೊಳ್ಳುವವರು ಯಾರು ಎಂಬ ಪ್ರಶ್ನೆಗಳು ಶುರುವಾಗಿದೆ.
ಈ ಮೊದಲು ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಐಪಿಎಲ್ ಗೆ ಸಂಪೂರ್ಣವಾಗಿ ಗುಡ್ ಬೈ ಹೇಳಿದ್ದಾರೆ. ಹೀಗಾಗಿ ರಾಯಲ್ಸ್ ತಂಡಕ್ಕೆ ಚೊಚ್ಚಲ ಐಪಿಎಲ್ ಗೆದ್ದುಕೊಟ್ಟ ಶೇನ್ ವಾರ್ನ್ ಕೋಚ್ ಆಗಿ ಮರಳಲಿದ್ದಾರೆಯೇ? ಹೀಗೊಂದು ವರದಿಗಳು ಬಂದಿವೆ.
ಅತ್ತ ಶೇನ್ ಕೂಡಾ ರಾಜಸ್ಥಾನ್ ಮಾಲಿಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ರಾಯಲ್ಸ್ ತಂಡ ಇದೀಗ ಶೇನ್ ಗೆ ಗಾಳ ಹಾಕಲು ಮಾತುಕತೆ ನಡೆಸುತ್ತಿದೆಯಂತೆ. ಇದೀಗ ಜುಲೈ 14 ಕ್ಕೆ ನಿಷೇಧ ಶಿಕ್ಷೆ ಮುಗಿಸುತ್ತಿರುವ ರಾಜಸ್ಥಾನ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಂಡದ ಆಯ್ಕೆಯಲ್ಲಿ ಮಗ್ನವಾಗಿವೆ. ಒಂದು ಶೇನ್ ಮತ್ತೆ ಐಪಿಎಲ್ ಗೆ ಬಂದರೆ ರಾಜಸ್ಥಾನ್ ತಂಡಕ್ಕೆ ರಂಗು ಬರಲಿದೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ