Select Your Language

Notifications

webdunia
webdunia
webdunia
webdunia

ಸಿಂಹಿಣಿಯರಿಗಿಂದು ಲಂಕಿಣಿಯರ ಸವಾಲ್!

ಸಿಂಹಿಣಿಯರಿಗಿಂದು ಲಂಕಿಣಿಯರ ಸವಾಲ್!
London , ಬುಧವಾರ, 5 ಜುಲೈ 2017 (12:52 IST)
ಲಂಡನ್: ಮಹಿಳೆಯರ ವಿಶ್ವಕಪ್ ನಲ್ಲಿ ಭಾರತ ತಂಡದ ಭರ್ಜರಿ ಪ್ರದರ್ಶನ ಹೊಸ ಹುರುಪು ಮೂಡಿಸಿದೆ. ಹೊಸ ಉತ್ಸಾಹದಲ್ಲಿ ಆಡುತ್ತಿರುವ ಟೀಂ ಇಂಡಿಯಾದ ಸಿಂಹಿಣಿಯರಿಗೆ ಇಂದು ಶ್ರೀಲಂಕಾದ ಲಂಕಿಣಿಯರು ಸವಾಲೊಡ್ಡಲಿದ್ದಾರೆ.


ಇಂದು ನಡೆಯುವ ಪಂದ್ಯದಲ್ಲಿ ದುರ್ಬಲ ಶ್ರೀಲಂಕಾ ತಂಡವನ್ನು ಸೋಲಿಸಲಿದೆ. ಒಂದೆಡೆ ಮೊನ್ನೆಯ ಪಂದ್ಯದಲ್ಲಿ ಇನ್ನೊಂದು ಏಷ್ಯಾ ಖಂಡದ ತಂಡ ಪಾಕಿಸ್ತಾನದ ಜತೆ ಸೆಣಸಿ ಅದ್ಭುತ ಗೆಲುವಿನ ಹುಮ್ಮಸ್ಸಲ್ಲಿ ಭಾರತೀಯ ವನಿತೆಯರಿದ್ದಾರೆ. ಅತ್ತ ಶ್ರೀಲಂಕಾ ಸ್ಥಿತಿ ಮಾತ್ರ ಶೋಚನೀಯವಾಗಿದೆ.

ಆಡಿದ ಮೂರೂ ಪಂದ್ಯಗಳಲ್ಲಿ ಸೋಲುಂಡಿರುವ ಲಂಕಾ ಮಹಿಳೆಯರು ಕೂಟದಿಂದ ನಿರ್ಗಮಿಸುವ ಹಾದಿಯಲ್ಲಿದ್ದಾರೆ. ಹಾಗಾಗಿ ಭರ್ಜರಿ ಫಾರ್ಮ್ ನಲ್ಲಿರುವ ಭಾರತದ ಮಹಿಳೆಯರಿಗೆ ಲಂಕಾ ಸುಲಭ ತುತ್ತಾಗಬಹುದು ಎಂದೇ ಲೆಕ್ಕಾಚಾರ ಹಾಕಲಾಗಿದೆ. ಹಾಗೆ ನೋಡಿದರೆ ಭಾರತ ತಂಡಕ್ಕೆ ಸವಾಲು ಎದುರಾಗುವುದೇ ಮುಂದಿನ ಹಂತದಲ್ಲಿ.

ಇಂದಿನ ಪಂದ್ಯ ಗೆದ್ದರೆ ಭಾರತದ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಆದರೆ ನಂತರ ಪ್ರಬಲ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಬೇಕಿದೆ. ಕಪ್ ಗೆದ್ದು ಇತಿಹಾಸ ನಿರ್ಮಿಸಬೇಕಾದರೆ,  ಭಾರತದ ಎದುರು ಕಠಿಣ ಹಾದಿಯಿದೆ.

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸಮಯ: ಮಧ್ಯಾಹ್ನ 3.00

ಇದನ್ನೂ ಓದಿ.. ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ವಿಚ್ಛೇದನ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇತ್ತ ಹೊಸ ಕೋಚ್ ಆಯ್ಕೆ ನಡೆಯುತ್ತಿದ್ದರೆ, ಅತ್ತ ರೈನಾ ಹಳೇ ಕೋಚ್ ಭೇಟಿಯಾಗಿದ್ದೇಕೆ?!