Publish Date: Wed, 05 Jul 2017 (10:12 IST)
Updated Date: Wed, 05 Jul 2017 (10:14 IST)
ನೆದರ್ಲ್ಯಾಂಡ್ಸ್: ಭಾರತದ ತಂಡದಲ್ಲಿ ಅವಕಾಶಕ್ಕಾಗಿ ಶತಾಯಗತಾಯ ಯತ್ನ ನಡೆಸುತ್ತಿರುವ ಸುರೇಶ್ ರೈನಾ ಸದ್ಯಕ್ಕೆ ಪತ್ನಿ ಜತೆ ನೆದರ್ಲ್ಯಾಂಡ್ಸ್ ನಲ್ಲಿದ್ದಾರೆ. ಅಂತಿಪ್ಪ ರೈನಾ ಹಳೇ ಕೋಚ್ ಗ್ಯಾರಿ ಕಸ್ಟರ್ನ್ ರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ.
ರೈನಾ ಹಳೇ ಕೋಚ್ ಹುಡುಕಿಕೊಂಡಿದ್ದು ಹೋಗಿದ್ದರೆ ಹಿಂದೆ ಬೇರೇನೂ ಕಾರಣವಿಲ್ಲ ಬಿಡಿ. ನೆದರ್ಲ್ಯಾಂಡ್ಸ್ ನಲ್ಲಿರುವ ಗ್ಯಾರಿ ಕ್ರಿಕೆಟ್ ಅಕಾಡೆಮಿಗೆ ರೈನಾ ಭೇಟಿ ನೀಡಿ ಹಳೇ ಕೋಚ್ ಜತೆಗೆ ಸ್ವಲ್ಪ ಹೊತ್ತು ಸಮಾಲೋಚನೆ ನಡೆಸಿದರು. ಇನ್ನು ಕೆಲ ಹೊತ್ತು ಬ್ಯಾಟಿಂಗ್ ಅಭ್ಯಾಸವನ್ನೂ ನಡೆಸಿದರು.
ಈ ಕ್ಷಣಗಳ ಫೋಟೋಗಳನ್ನು ರೈನಾ ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ಪ್ರಕಟಿಸಿದ್ದಾರೆ. ಟೀಂ ಇಂಡಿಯಾ ಕರೆಗಾಗಿ ಕಾಯುತ್ತಿರುವ ರೈನಾ ಆಗಾಗ ತಮ್ಮ ಅಭ್ಯಾಸದ ಕ್ಷಣಗಳನ್ನು ಟ್ವಿಟರ್, ಇನ್ ಸ್ಟಾಗ್ರಾಂ ನಲ್ಲಿ ಪ್ರಕಟಿಸುತ್ತಾ ಆಯ್ಕೆಗಾರರ ಮನ ಸೆಳೆಯುವ ಪ್ರಯತ್ನ ನಡೆಸುತ್ತಿರುತ್ತಾರೆ. ಇದೂ ಅಂತಹದ್ದೊಂದು ಪ್ರಯತ್ನವೆಂದೇ ಹೇಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ