Publish Date: Tue, 16 May 2023 (09:12 IST)
Updated Date: Tue, 16 May 2023 (09:14 IST)
ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಪ್ರಸ್ತುತ ಐಪಿಎಲ್ ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ರೀತಿಗೆ ಟೀಕೆಗೊಳಗಾಗುತ್ತಿದ್ದಾರೆ.
ಕೊಹ್ಲಿ, ರೋಹಿತ್ ನಿಧಾನಗತಿಯ ಬ್ಯಾಟಿಂಗ್ ನಿಂದ ಟ್ರೋಲ್ ಗೊಳಗಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಕೋಚ್ ರವಿಶಾಸ್ತ್ರಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ರೋಹಿತ್, ಕೊಹ್ಲಿಯಂತಹ ಆಟಗಾರರು ತಾವು ಏನೆಂದು ಈಗಾಗಲೇ ಸಾಬೀತುಪಡಿಸಿದ್ದಾರೆ. ಇವರಿಬ್ಬರೂ ಇನ್ನು ಮುಂದಿನ ದಿನಗಳಲ್ಲಿ ಟಿ20 ಕ್ರಿಕೆಟ್ ಗಿಂತ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನತ್ತ ಗಮನಹರಿಸುವುದು ಉತ್ತಮ ಎಂದಿದ್ದಾರೆ ರವಿಶಾಸ್ತ್ರಿ.