ಕನ್ನಡದಲ್ಲಿ ಧನ್ಯವಾದ ಸಲ್ಲಿಸಿದ ಕೆಎಲ್ ರಾಹುಲ್: ಆರ್ ಸಿಬಿ ಬಾ ಮಗ ಎಂದ ಫ್ಯಾನ್ಸ್

Krishnaveni K
ಸೋಮವಾರ, 9 ಸೆಪ್ಟಂಬರ್ 2024 (11:09 IST)
ಬೆಂಗಳೂರು: ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ನಾಲ್ಕೂ ದಿನವೂ ಮೈದಾನದಲ್ಲಿ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಕನ್ನಡಿಗ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಕನ್ನಡದಲ್ಲೇ ಧನ್ಯವಾದ ಸಲ್ಲಿಸಿದ್ದಾರೆ.

ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಎ ತಂಡದ ಪರ ಆಡಿದ ಕೆಎಲ್ ರಾಹುಲ್ ಬಿ ತಂಡದ ವಿರುದ್ಧ ಎರಡನೇ ಇನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ ದುರದೃಷ್ಟವಶಾತ್ ರಾಹುಲ್ ತಂಡ ಈ ಪಂದ್ಯವನ್ನು ಸೋತಿದೆ. ಹಾಗಿದ್ದರೂ ಎಲ್ಲಾ ದಿನಗಳಲ್ಲೂ ಮೈದಾನಕ್ಕೆ ಬಂದ ರಾಹುಲ್ ಅಭಿಮಾನಿಗಳು ತವರಿನ ಹುಡುಗನಿಗೆ ಚಿಯರ್ ಅಪ್ ಮಾಡಿದ್ದಾರೆ.

ಇದು ರಾಹುಲ್ ಹೃದಯ ತಟ್ಟಿದೆ. ಪಂದ್ಯದ ನಂತರ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಎಂದು ಕನ್ನಡದಲ್ಲೇ ಬರೆದು ಧನ್ಯವಾದ ಸಲ್ಲಿಸಿದ್ದಾರೆ. ಇದಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು, ನೀವು ನಮ್ಮ ಕನ್ನಡದ ಹುಡುಗ, ಕರ್ನಾಟಕದ ಮನೆ ಮಗ ಎಂದಿದ್ದಾರೆ.

ಅನೇಕರು ಈ ಸಲ ಐಪಿಎಲ್ ನಲ್ಲಿ ಆರ್ ಸಿಬಿಗೆ ಬಾ ಮಗ ಎಂದು ಕರೆದಿದ್ದಾರೆ. ಮತ್ತೆ ಕೆಲವರು ರಾಹುಲ್ ತಮ್ಮ ಮೇಲಿನ ಅಭಿಮಾನಿಗಳ ಪ್ರೀತಿ ನೋಡಿಯಾದರೂ ಈ ಸಲ ಆರ್ ಸಿಬಿಗೆ ಬರೋದು ಪಕ್ಕಾ ಎಂದಿದ್ದಾರೆ. ವಿಶೇಷವೆಂದರೆ ರಾಹುಲ್ ಚಿನ್ನಸ್ವಾಮಿ ಮೈದಾನದಲ್ಲಿ ಆಡುತ್ತಿರುವಾಗ ಅಭಿಮಾನಿಗಳು ‘ಆರ್ ಸಿಬಿ ಮುಂದಿನ ಕ್ಯಾಪ್ಟನ್’ ಎಂದು ಕೂಗಿ ಹೇಳುತ್ತಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊಹಮ್ಮದ್ ಶಮಿ ಏನು ತಪ್ಪು ಮಾಡಿದ್ದಾರೆ.. ಅಜಿತ್ ಅಗರ್ಕರ್ ವಿರುದ್ಧ ಫ್ಯಾನ್ಸ್ ಗರಂ

IND vs AUS: ಟೀಂ ಇಂಡಿಯಾಕ್ಕೆ ಇಂದೂ ಗೆಲ್ಲಲೇಬೇಕು

ಹಳೇ ವಿಚಾರ ಹೇಳಿ ಹರ್ಲಿನ್ ಡಿಯೋಲ್ ಗೇ ಅಚ್ಚರಿ ನೀಡಿದ ಪ್ರಧಾನಿ ಮೋದಿ

ವಿಶ್ವಕಪ್ ಟ್ರೋಫಿ ಮುಟ್ಟದೇ ಪೋಸ್ ಕೊಟ್ಟ ಮೋದಿ: ಪ್ರಧಾನಿಗೆ ಕ್ರಿಕೆಟಿಗರು ಕೊಟ್ಟ ಗಿಫ್ಟ್ ಏನು

ವಿಶ್ವ ಚಾಂಪಿಯನ್ ಆದ ಮಹಿಳಾ ಕ್ರಿಕೆಟಿಗರನ್ನು ಭೇಟಿಯಾದ ಮೋದಿ: ಟ್ರೋಫಿ ಜೊತೆಗೆ ಪೋಸ್

ಮುಂದಿನ ಸುದ್ದಿ
Show comments