Webdunia - Bharat's app for daily news and videos

Install App

ತುಳುನಾಡಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ ಸುನಿಲ್ ಶೆಟ್ಟಿ, ಸಾಥ್ ನೀಡಿದ ಕೆಎಲ್ ರಾಹುಲ್

Krishnaveni K
ಶನಿವಾರ, 25 ಮೇ 2024 (15:14 IST)
ಮುಂಬೈ: ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ತವರು ತುಳುನಾಡಿನ ಬಗ್ಗೆ ಹೆಮ್ಮೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ವಿಶೇಷವೆಂದರೆ ಅದನ್ನು ಅಳಿಯ ಕೆಎಲ್ ರಾಹುಲ್ ಕೂಡಾ ಶೇರ್ ಮಾಡಿಕೊಂಡು ಅನುಮೋದಿಸಿದ್ದಾರೆ.

ಸುನಿಲ್ ಶೆಟ್ಟಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ತುಳುನಾಡು ಎಷ್ಟು ಚಂದ ಎಂದು ಬರೆದುಕೊಂಡಿದ್ದಾರೆ. ‘ಎಷ್ಟು ಚಂದ ನನ್ನ ತುಳುನಾಡು. ನಾನು ಹೋಟೆಲ್ ಗೆ ಹೋಗಿ ವೈಟರ್ ನನ್ನು ದಣಿ ಎನ್ನುತ್ತೇನೆ, ಆತನೂ ನನ್ನನ್ನು ದಣಿ ಎನ್ನುತ್ತಾನೆ. ಹಾಗಂದ ಮಾತ್ರಕ್ಕೆ ನಾವಿಬ್ಬರೂ ಅಷ್ಟೊಂದು ಶ್ರೀಮಂತರು ಎಂದರ್ಥವಲ್ಲ. ನಾನು ಅಂಗಡಿಗೆ ಹೋಗಿ ಅಣ್ಣ ಎನ್ನುತ್ತೇನೆ, ಆತನೂ ಹೇಳಿ ಅಣ್ಣ ಎನ್ನುತ್ತಾನೆ. ಹಾಗಂದ ಮಾತ್ರಕ್ಕೆ ನಾವು ಸಹೋದರರಲ್ಲ. ನಾನು ಮೀನು ಮಾರುಕಟ್ಟೆಗೆ ಹೋಗಿ ಅಮ್ಮ ಎನ್ನುತ್ತೇನೆ, ಆಕೆಯೂ ಮಗ ಎನ್ನುತ್ತಾಳೆ. ಹಾಗಂದ ಮಾತ್ರಕ್ಕೆ ಆಕೆ ನನ್ನ ತಾಯಿಯಲ್ಲ. ನಮ್ಮ ತುಳುನಾಡ ಸಂಸ್ಕೃತಿ ಇದೆಲ್ಲದಕ್ಕಿಂತ ಭಿನ್ನ’ ಎಂದು ಸುನಿಲ್ ಶೆಟ್ಟಿ ಅಭಿಮಾನ ಮೆರೆದಿದ್ದಾರೆ.

ಇದನ್ನು ಅಳಿಯ, ಕ್ರಿಕೆಟಿಗ ಕೆಎಲ್ ರಾಹುಲ್ ಶೇರ್ ಮಾಡಿಕೊಂಡಿದ್ದಾರೆ. ರಾಹುಲ್ ಕೂಡಾ ಮೂಲತಃ ಮಂಗಳೂರಿನವರು. ಬಿಡುವು ಸಿಕ್ಕಾಗಲೆಲ್ಲಾ ಈಗಲೂ ಮಂಗಳೂರಿಗೆ ಭೇಟಿ ನೀಡುತ್ತಾರೆ. ತುಳು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ಹೀಗಾಗಿ ಮಾವನ ತುಳುನಾಡಿನ ವೈಭವ ಮರೆಯುವ ಸಂದೇಶವನ್ನು ತಾವೂ ಶೇರ್ ಮಾಡಿಕೊಂಡು ಅಭಿಮಾನ ಮೆರೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಗೌತಮ್ ಗಂಭೀರ್ ಪಿಚ್ ಕ್ಯುರೇಟರ್ ನಡುವೆ ನಿಜಕ್ಕೂ ನಡೆದಿದ್ದೇನು ಇಲ್ಲಿದೆ ವಿವರ

ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು

ಮಹಿಳಾ ಚೆಸ್ ವಿಶ್ವ ಕಪ್ ಗೆದ್ದು ಚಾರಿತ್ರಿಕ ಸಾಧನೆ ಮೆರೆದ ಭಾರತದ ದಿವ್ಯಾ ದೇಶ್‌ಮುಖ್‌

ರಿಷಭ್ ಪಂತ್ ಎದೆಗಾರಿಕೆ, ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಸ್ಫೂರ್ತಿ: ಗೌತಮ್ ಗಂಭೀರ್ ಬಿಚ್ಚುಮಾತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments