Webdunia - Bharat's app for daily news and videos

Install App

ಅನುಷ್ಕಾ-ವಿರಾಟ್ ಸಹಾಯ ಮಾಡದೇ ಇದ್ದಿದ್ದರೆ ಕೆಎಲ್ ರಾಹುಲ್ ಕೆರಿಯರ್ ಕತೆ ಖತಂ ಆಗುತ್ತಿತ್ತಂತೆ!

Webdunia
ಭಾನುವಾರ, 24 ಜೂನ್ 2018 (08:36 IST)
ಮುಂಬೈ: ವಿರಾಟ್ ಕೊಹ್ಲಿಯ ನೆಚ್ಚಿನ ಬಂಟ ಕೆಎಲ್ ರಾಹುಲ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಕೆಲವು ವರ್ಷಗಳ ಹಿಂದೆ ಶುರುವಿನಲ್ಲೇ ಕಮರಿ ಹೋಗಬೇಕಿದ್ದ ರಾಹುಲ್ ಕೆರಿಯರ್ ಈ ಸ್ಟಾರ್ ಜೋಡಿಯಿಂದಾಗಿ ಅರಳಿತಂತೆ!

ಹಾಗಂತ ಕೆಎಲ್ ರಾಹುಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆಗ ನಾನು ಕಳಪೆ ಫಾರ್ಮ್ ನಲ್ಲಿದ್ದೆ. ನನ್ನ ರೂಂನಲ್ಲಿ ಏಕಾಂಗಿಯಾಗಿ ಕುಳಿತು ಮ್ಯಾಚ್ ನಲ್ಲಿ ಮಾಡಿದ ಸರಿ ತಪ್ಪುಗಳ ಬಗ್ಗೆ ಚಿಂತೆ ಮಾಡುತ್ತಾ ಕೂತಿದ್ದೆ.

ಆಗ ನನ್ನ ಬಳಿ ಬಂದ ಅನುಷ್ಕಾ ಡಿನ್ನರ್ ಗೆ ಕರೆದರು. ನಾನು ಒಲ್ಲದ ಮನಸ್ಸಿನಿಂದಲೇ ಹೋದೆ. ಡಿನ್ನರ್ ಟೇಬಲ್ ನಲ್ಲಿ ವಿರಾಟ್ ಮತ್ತು ಅನುಷ್ಕಾ ಎದುರು ನಾನು ಕೂತಿದ್ದೆ. ಆದರೆ ನಾನು ತುಂಬಾ ಮಂಕಾಗಿದ್ದೆ. ನನ್ನನ್ನು ನೋಡಿ ಇಬ್ಬರೂ ಸಮಾಧಾನಿಸಿದರು. ಇಂತಹ ಒತ್ತಡದ ಪರಿಸ್ಥಿತಿಯಿಂದ ಹೊರ ಬರುವುದು ಹೇಗೆಂದು ತಿಳಿಸಿದರು. ಬಹುಶಃ ಅವರಿಬ್ಬರಿಗೂ ನನ್ನ ಮನಸ್ಥಿತಿ ಅರಿವಾಗಿತ್ತು.

ಅದಾದ ಬಳಿಕ ನಾನು ನಿರಾಶೆ, ಒತ್ತಡಗಳನ್ನು ದಾಟಿ ಮುನ್ನಡೆಯಲು ಕಲಿತುಕೊಂಡೆ. ಅವರಿಬ್ಬರ ಜೋಡಿ ನೋಡಿದರೆ ಒತ್ತಡವೆಲ್ಲಾ ಮರೆಯಾಗುತ್ತದೆ. ಅಂದು ಬಹುಶಃ ಅವರು ನನ್ನನ್ನು ಡಿನ್ನರ್ ಗೆ ಕರೆದು ತಿಳಿಸಿ ಹೋಗದೇ ಇದ್ದಿದ್ದರೆ ನನ್ನ ಕ್ರಿಕೆಟ್ ಕೆರಿಯರ್ ಅಲ್ಲಿಗೇ ಮುಗಿಯುತ್ತಿತ್ತು ಎಂದು ಕೆಎಲ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಾರ್ಕೆಟಿಂಗ್ ಗಿಮಿಕ್‌ಗಾಗಿ ನಕಲಿ ಕಣ್ಣೀರು: RCB ಪ್ರಾಂಚೈಸಿಯನ್ನು ತರಾಟೆಗೆ ತೆಗೆದುಕೊಂಡ ಮೋಹನ್‌ದಾಸ್ ಪೈ

ಈ ವಿಚಾರಕ್ಕೆ ಯಾವತ್ತೂ ಹಿಂದೆ ಸರಿಯುವುದಿಲ್ಲ: ಚೇತೇಶ್ವರ ರಿಯ್ಯಾಕ್ಷನ್

ಕಾಲ್ತುಳಿತ ಘಟನೆ ಬಳಿಕ ಆರ್ ಸಿಬಿ ಮೊದಲ ಪೋಸ್ಟ್: ಮಹತ್ವದ ಘೋಷಣೆ

ಒಂದೇ ವರ್ಷಕ್ಕೆ ಡೆಲ್ಲಿ ಬಿಟ್ಟು ಈ ತಂಡವನ್ನು ಸೇರಿಕೊಳ್ಳಲಿದ್ದಾರೆ ಕೆಎಲ್ ರಾಹುಲ್

ಮೊಹಮ್ಮದ್ ಶಮಿಯನ್ನು ಟೀಂ ಇಂಡಿಯಾಕ್ಕೆ ಯಾಕೆ ಆಯ್ಕೆ ಮಾಡ್ತಿಲ್ಲ: ಶಾಕಿಂಗ್ ಹೇಳಿಕೆ ನೀಡಿದ ವೇಗಿ

ಮುಂದಿನ ಸುದ್ದಿ
Show comments