Webdunia - Bharat's app for daily news and videos

Install App

ಫೀಲ್ಡಿಂಗ್ ನಲ್ಲಿ ರಾಹುಲ್ ದ್ರಾವಿಡ್ ಆದ ಕೆಎಲ್ ರಾಹುಲ್!

Webdunia
ಮಂಗಳವಾರ, 21 ಆಗಸ್ಟ್ 2018 (17:48 IST)
ಟ್ರೆಂಟ್ ಬ್ರಿಡ್ಜ್: ತೃತೀಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಬ್ಯಾಟಿಂಗ್ ನಲ್ಲಿ ಉತ್ತಮ ಆರಂಭ ದೊರಕಲು ನೆರವಾಗಿದ್ದಷ್ಟೇ ಅಲ್ಲದೆ, ಫೀಲ್ಡಿಂಗ್ ನಲ್ಲೂ ಮಿಂಚಿದ್ದಾರೆ.
 

ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ನಲ್ಲೂ ಪ್ರಮುಖ ಕ್ಯಾಚ್ ಹಿಡಿದು ತಂಡಕ್ಕೆ ನೆರವಾಗಿದ್ದ ಕೆಎಲ್ ರಾಹುಲ್ ದ್ವಿತೀಯ ಇನಿಂಗ್ಸ್ ನಲ್ಲಿ ಇದುವರೆಗೆ ಬಿದ್ದ ನಾಲ್ಕು ವಿಕೆಟ್ ಗಳ ಪೈಕಿ ಎರಡು ಕ್ಯಾಚ್ ತಾವೇ ಪಡೆದಿದ್ದಾರೆ.

ರಾಹುಲ್ ದ್ರಾವಿಡ್ ರಂತೆ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುವ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಮಾಡುವ ಮೂಲಕ ಕ್ರಿಕೆಟ್ ವಾಲ್ ನ್ನು ನೆನಪಿಸಿದ್ದಾರೆ. ಅಷ್ಟೇ ಅಲ್ಲದೆ, ಫೀಲ್ಡಿಂಗ್ ನಲ್ಲಿ ಬದಲಾದ ಅವರ ಆಕ್ರಮಣಕಾರಿ ಸ್ವಭಾವ ಕೂಡಾ ನೋಡುಗರಿಗೆ ಅಚ್ಚರಿ ಮೂಡಿಸಿದೆ.

ನಾಲ್ಕನೇ ದಿನದಾಟದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ಟೀಂ ಇಂಡಿಯಾ ನೀಡಿದ 520 ರನ್ ಗಳ ಬೃಹತ್ ಮೊತ್ತ ಚೇಸ್ ಮಾಡುವಲ್ಲಿ ಆರಂಭದಲ್ಲಿಯೇ ಎಡವಿದೆ. ಇಂದು ದಿನದ ಆರಂಭದಲ್ಲಿಯೇ ವೇಗಿ ಇಶಾಂತ್ ಶರ್ಮಾ ಆರಂಭಿಕರಿಬ್ಬರನ್ನೂ ಬಹುಬೇಗ ಪೆವಿಲಿಯನ್ ಗೆ ಕಳುಹಿಸಿದ್ದಾರೆ.

ಅದಾದ ಬಳಿಕ 84 ರನ್ ಗಳಿಸಿರುವ ಇಂಗ್ಲೆಂಡ್ ಮತ್ತೆ ಎರಡು ವಿಕೆಟ್ ಕಳೆದುಕೊಂಡಿದೆ. ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಉಳಿದೆರಡು ವಿಕೆಟ್ ಪಡೆದರು. ಸದ್ಯಕ್ಕೆ ಕ್ರೀಸ್ ನಲ್ಲಿ 3 ರನ್ ಗಳಿಸಿರುವ ನಾಯಕ ಜೋ ರೂಟ್ ಮತ್ತು 19 ರನ್ ಗಳಿಸಿರುವ ಜೋಸ್ ಬಟ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.  ಉಳಿದ ವಿಕೆಟ್ ಗಳ ನೆರವಿನಿಂದ ಇಂಗ್ಲೆಂಡ್ ಗೆಲುವಿಗೆ ಇನ್ನೂ 437 ರನ್ ಗಳ ಬೃಹತ್ ಮೊತ್ತ ದಾಟಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಾಮನ್‌ವೆಲ್ತ್‌ ಗೇಮ್ಸ್‌, ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಫೈನಲ್‌

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಅಜಿಂಕ್ಯಾ ರೆಹಾನೆ

ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ ವಿಕೆಟ್ ಪತನ: ಗೌತಮ್ ಗಂಭೀರ್ ಆಪ್ತ ರಾಜೀನಾಮೆ

IND vs SL: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಕೆಎಲ್ ರಾಹುಲ್ ಗೆ ಮಹತ್ವದ ಜವಾಬ್ಧಾರಿ

ಫಾರ್ಮ್ ಇಲ್ಲ ಅಂದ್ರೆ ಡ್ರಾಪ್ ಮಾಡೋದು ಸಂಜು ಸ್ಯಾಮ್ಸನ್ ಗೆ ಮಾತ್ರನಾ: ಅಭಿಷೇಕ್ ಶರ್ಮಾ ಏನು ಸ್ಪೆಷಲ್

ಮುಂದಿನ ಸುದ್ದಿ
Show comments