ಒಂದು ವಿಷಯ ಹೇಳಬೇಕಾಗಿದೆ ಎಂದು ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಕೆಎಲ್ ರಾಹುಲ್

Krishnaveni K
ಶುಕ್ರವಾರ, 23 ಆಗಸ್ಟ್ 2024 (10:50 IST)
ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ದಿಡೀರ್ ಆಗಿ ಹಾಕಿರುವ ಪೋಸ್ಟ್ ಒಂದು ಎಲ್ಲರ ತಲೆಗೆ ಹುಳ ಬಿಟ್ಟಂತಾಗಿದೆ.

ರಾಹುಲ್ ನಿನ್ನೆ ಸಂಜೆ ಇದ್ದಕ್ಕಿದ್ದಂತೆ ‘ನನಗೆ ಒಂದು ವಿಷಯ ಹೇಳಬೇಕಾಗಿದೆ. ನಿರೀಕ್ಷಿಸಿ’ ಎಂದಷ್ಟೇ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಅವರ ಈ ಪೋಸ್ಟ್ ನೋಡುತ್ತಿದ್ದಂತೇ ಎಲ್ಲರಿಗೂ ಅಚ್ಚರಿಯಾಗಿತ್ತು. ಇದೇನು ಮಹತ್ವದ ವಿಚಾರ ಹೇಳಲಿದ್ದಾರೆ ಎಂದು ಎಲ್ಲರೂ ಕಾಯುತ್ತಲೇ ಇದ್ದರು.

ಇದನ್ನು ನೋಡಿ ರಾಹುಲ್ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಹೇಳುತ್ತಿರಬಹುದಾ ಎಂಬ ಆತಂಕವೂ ಕೆಲವರಿಗೆ ಬಂದಿದ್ದು ಸುಳ್ಳಲ್ಲ. ಮತ್ತೆ ಕೆಲವರು ಅವರು ಆರ್ ಸಿಬಿಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಹೇಳಬಹುದೇನೋ ಎಂದು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಕೊನೆಯಲ್ಲಿ ರಾಹುಲ್ ತಮ್ಮ ಸ್ಟೈಲಿಶ್ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಇದನ್ನು ನೋಡಿದರೆ ಅವರು ಯಾವುದೋ ಬ್ರ್ಯಾಂಡ್ ಬಗ್ಗೆ ಹೇಳುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಹಾಗಿದ್ದರೂ ಈ ಫೋಟೋ ನೋಡಿ ಏನೋ ದೊಡ್ಡದಾಗಿ ಸಿಗ್ನಲ್ ಕೊಡ್ತಿದ್ದೀರಿ ಏನು ಅಂತ ಬೇಗ ಹೇಳಿ ಬಾಸ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ದಬಂಗ್‌ ಡೆಲ್ಲಿ ತಂಡಕ್ಕೆ ಪ್ರೊ ಕಬಡ್ಡಿ ಲೀಗ್‌ ಕಿರೀಟ: ಫೈನಲ್‌ನಲ್ಲಿ ಮುಗ್ಗರಿಸಿದ ಪಟ್ನಾ ಪೈರೇಟ್ಸ್‌

ಕರ್ನಾಟಕ ದತ್ತುಪುತ್ರ ನಾನು.. ಕನ್ನಡ ರಾಜ್ಯೋತ್ಸವಕ್ಕೆ ದಿನೇಶ್ ಕಾರ್ತಿಕ್ ಹೇಳಿದ್ದೇನು Video

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶ್ರೇಯಸ್ ಅಯ್ಯರ್: ಲೇಟೆಸ್ಟ್ ಹೆಲ್ತ್ ಅಪ್ ಡೇಟ್ ಇಲ್ಲಿದೆ

ಆಸ್ಟ್ರೇಲಿಯಾಕ್ಕೆ ಶನಿ ದೆಸೆ ಶುರುವಾಗಿದ್ದು ಇಲ್ಲಿಂದಲೇ ಅಂತಿದ್ದಾರೆ ಫ್ಯಾನ್ಸ್

IND vs AUS: ಟಿ20 ಯಲ್ಲೂ ಆಸ್ಟ್ರೇಲಿಯಾ ಕೈಲಿ ಹೊಡೆಸಿಕೊಂಡ ಟೀಂ ಇಂಡಿಯಾ

ಮುಂದಿನ ಸುದ್ದಿ
Show comments