Webdunia - Bharat's app for daily news and videos

Install App

ಬಡ ವಿದ್ಯಾರ್ಥಿಯ ಫೀಸ್ ಕಟ್ಟಿ ಮತ್ತೊಮ್ಮೆ ಕೆಎಲ್ ರಾಹುಲ್

Krishnaveni K
ಮಂಗಳವಾರ, 8 ಅಕ್ಟೋಬರ್ 2024 (10:04 IST)
ಬೆಂಗಳೂರು: ಸತತ ಎರಡನೇ ವರ್ಷ ಬಡ ವಿದ್ಯಾರ್ಥಿಯ ಶಿಕ್ಷಣ ಶುಲ್ಕ ಪಾವತಿಸಿ ಕರ್ನಾಟಕ ಮೂಲದ ಕ್ರಿಕೆಟಿಗ ಕೆಎಲ್ ರಾಹುಲ್ ಎಲ್ಲರ ಮನಗೆದ್ದಿದ್ದಾರೆ. ಬಿಕಾಂ ಓದುತ್ತಿರುವ ಅಮೃತ್ ಮಾವಿನಕಟ್ಟೆ ಎಂಬ ವಿದ್ಯಾರ್ಥಿಗೆ ರಾಹುಲ್ ನೆರವಾಗಿದ್ದಾರೆ.

ಕಳೆದ ವರ್ಷ ಮೊದಲ ವರ್ಷದ ಶುಲ್ಕ ಪಾವತಿಸಿದ್ದ ಕೆಎಲ್ ರಾಹುಲ್, ಎರಡನೇ ವರ್ಷದ ಶುಲ್ಕವನ್ನೂ ಭರಿಸುವುದಾಗಿ ಭರವಸೆ ನೀಡಿದ್ದರು. ರಾಹುಲ್ ತಾವು ಈ ಹಿಂದೆ ಕೊಟ್ಟ ಮಾತನ್ನು ಮರೆತಿರಲಿಲ್ಲ. ಇದೀಗ 3 ನೇ ಮತ್ತು ನಾಲ್ಕನೇ ಸೆಮಿಸ್ಟರ್ ನ 75,504 ರೂ. ಪಾವತಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಅಮೃತ್ ಮೂಲತಃ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದವರು. ಉತ್ತಮ ಅಂಕ ಪಡೆದಿದ್ದರೂ ಅವರಿಗೆ ಪದವಿ ಶಿಕ್ಷಣಕ್ಕೆ ಕಾಲೇಜಿಗೆ ಸೇರಲು ದುಡ್ಡಿನ ಕೊರತೆಯಾಗಿತ್ತು. ಅವರ ಪರಿಸ್ಥಿತಿ ಸಂಘಟನೆಯೊಂದರ ಮೂಲಕ ಕೆಎಲ್ ರಾಹುಲ್ ಗೆ ತಿಳಿಯಿತು.

ತಕ್ಷಣವೇ ಅವರು ವಿದ್ಯಾರ್ಥಿಯ ಮೊದಲ ವರ್ಷದ ಶುಲ್ಕ ಪಾವತಿಸಿದ್ದಲ್ಲದೆ, ಮುಂದೆಯೂ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ರಾಹುಲ್ ನೀಡಿದ ಸಹಾಯದಿಂದಾಗಿ ಮೊದಲ ವರ್ಷ ಉತ್ತಮ ಅಂಕಗಳೊಂದಿಗೆ ಪೂರ್ತಿ ಮಾಡಿರುವ ಅಮೃತ್ ಈಗ ದ್ವಿತೀಯ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ ಅಂದು ನೀಡಿದ ಭರವಸೆಯನ್ನು ಮರೆಯದೇ ರಾಹುಲ್ ಈಗ ಎರಡನೇ ವರ್ಷಕ್ಕೂ ಸಹಾಯ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಭಾರತ-ಅಫ್ಗನ್‌ ಟಿ20 ಕದನ: ಶ್ರೇಯಸ್‌ ಅಯ್ಯರ್‌ ನಾಯಕತ್ವಕ್ಕೆ ಮತ್ತೆ ಅಗ್ನಿಪರೀಕ್ಷೆ

ಮಹಿಳಾ ಏಷ್ಯಾಕಪ್ ಫೈನಲ್ ಇಂದು: ಲಂಕಾ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಹರ್ಮನ್‌ಪ್ರೀತ್‌ ಕೌರ್‌ ಕಾತರ

ಕೌಂಟಿ ಕ್ರಿಕೆಟ್‌ನಲ್ಲಿ ಜಾದೂ ಮಾಡಿದ ಕುಲದೀಪ್‌: ಭಾರತ ತಂಡದಿಂದ ನಿರ್ಲಕ್ಷಿಸಿದಕ್ಕೆ ಆಯ್ಕೆ ಮಂಡಳಿಗೆ ಸಂದೇಶ ರವಾನೆ

IND vs AFG: ಟೀಂ ಇಂಡಿಯಾ, ಅಫ್ಘಾನಿಸ್ತಾನ ಟಿ20 ಸರಣಿ ವೇಳಾಪಟ್ಟಿ, ಲೈವ್ ಪ್ರಸಾರ ಎಲ್ಲಿ ಇಲ್ಲಿದೆ ವಿವರ

IND vs BAN: ಮಹಿಳಾ ಏಷ್ಯಾ ಕಪ್ ಫೈನಲ್ ಗೆ ಭಾರತ ತಂಡ: ಫೈನಲ್ ಯಾವಾಗ, ಎಷ್ಟನೇ ಬಾರಿ ಫೈನಲ್ ಪ್ರವೇಶಿಸುತ್ತಿದೆ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments