Daily Horoscope
✕

ಕೊಹ್ಲಿ ಶತಕ ಗಳಿಸಿದ್ದಾರೆಂದು ನಾನು ಹೊರಗೆ ಹೋಗ್ಬೇಕಾ? ಪತ್ರಕರ್ತರ ಮುಂದೆ ಕೆಎಲ್ ರಾಹುಲ್ ಆಕ್ರೋಶ

Webdunia
ಶುಕ್ರವಾರ, 9 ಸೆಪ್ಟಂಬರ್ 2022 (09:20 IST)
ದುಬೈ: ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ಆರಂಭಿಕರಾಗಿ ಕಣಕ್ಕಿಳಿದು ವಿರಾಟ್ ಕೊಹ್ಲಿ ಶತಕ ಗಳಿಸಿದ ಬೆನ್ನಲ್ಲೇ ಅವರು ಟೀಂ ಇಂಡಿಯಾ ಟಿ20 ಪಂದ್ಯಗಳಲ್ಲಿ ಆರಂಭಿಕರಾಗಬೇಕೆಂಬ ಒತ್ತಾಯ ಮತ್ತೆ ಶುರುವಾಗಿದೆ.

ನಿನ್ನೆ ಪಂದ್ಯದ ಬಳಿಕ ಕೆಎಲ್ ರಾಹುಲ್ ಮಾಧ‍್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದಾಗ ಅವರಿಗೂ ಪತ್ರಕರ್ತರೊಬ್ಬರು ಇದೇ ಪ್ರಶ್ನೆ ಕೇಳಿದ್ದಾರೆ. ಕೊಹ್ಲಿ ಆರಂಭಿಕರಾಗಬೇಕು ಎಂದು ನಿಮಗನಿಸುತ್ತಾ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದು ಕೆಎಲ್ ರಾಹುಲ್ ರನ್ನು ಕೆರಳಿಸಿತು.

ರೋಹಿತ್ ತಂಡಕ್ಕೆ ಬಂದರೆ ಅವರ ಜೊತೆ ರಾಹುಲ್ ಆರಂಭಿಕರಾಗುತ್ತಾರೆ. ಆದರೆ ಅದೇ ರಾಹುಲ್ ಗೆ ಇಂತಹ ಪ್ರಶ್ನೆ ಎದುರಾದಾಗ ತಕ್ಕ ತಿರುಗೇಟು ನೀಡಿದ ಅವರು ‘ಹಾಗಿದ್ದರೆ ನಾನು ಏನು ಮಾಡಬೇಕು ಎಂಬುದು ನಿಮ್ಮ ಅಭಿಪ್ರಾಯ? ತಂಡದಿಂದ ಹೊರಗೆ ಹೋಗಬೇಕಾ?’ ಎಂದು ಕಿಡಿ ಕಾರಿದ್ದಾರೆ. ಬಳಿಕ ಮುಂದುವರಿಸಿದ ಅವರು ಕೊಹ್ಲಿ ಕೇವಲ ಆರಂಭಿಕರಾಗಿ ಮಾತ್ರವಲ್ಲ, ಮೂರನೇ ಕ್ರಮಾಂಕದಲ್ಲಿ ಆಡಿದರೂ ಶತಕ ಗಳಿಸಬಲ್ಲರು. ಈವತ್ತು ಅವರು ಆರಂಭಿಕನ ಪಾತ್ರ ನಿಭಾಯಿಸಬೇಕಿತ್ತು. ಅದನ್ನು ಅವರು ಚೆನ್ನಾಗಿ ನಿಭಾಯಿಸಿದರು. ಮುಂದಿನ ಪಂದ್ಯಗಳಲ್ಲಿ ಸಂದರ್ಭಕ್ಕೆ ತಕ್ಕ ಹಾಗೆ ಯಾವ ಕ್ರಮಾಂಕದಲ್ಲಿ ಆಡಬೇಕೋ ಅಲ್ಲಿ ಆಡುತ್ತಾರೆ’ ಎಂದು ರಾಹುಲ್ ವಿವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI: ಅಯ್ಯೋ ಚೇಟಾ ಸೆಂಚುರಿ ಮಿಸ್ ಆಯ್ತಲ್ಲಾ.. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್

IND vs WI 2nd T20I: ರಾಂಚಿಯಲ್ಲಿ ರೋಚಕ ಸಮರ, ಪಂದ್ಯದ ಸಮಯ, ಟಿವಿ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೌರ್ ನಡುವೆ ಹೀಗೆಲ್ಲಾ ನಡೆಯುತ್ತಿತ್ತಾ.. ಹರಿದಾಡುತ್ತಿದೆ ಹೀಗೊಂದು ಸುದ್ದಿ

ಅಜಿತ್ ಅಗರ್ಕರ್ ಹೋಗಿದ್ದಕ್ಕೆ ಭುವನೇಶ್ವರ್ ಕಮ್ ಬ್ಯಾಕ್, ಶಮಿಗೂ ಹೀಗೇ ಆಗಲಿ ಎಂದ ಫ್ಯಾನ್ಸ್

IND vs WI: ಭಾರತ vs ವೆಸ್ಟ್ ಇಂಡೀಸ್ 1st T20: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ; ನಮನ್ ಧೀರ್ ಟಿ20ಐ ಪದಾರ್ಪಣೆ

ಮುಂದಿನ ಸುದ್ದಿ
Show comments