Daily Horoscope

Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಗೆ ಟೀಂ ಇಂಡಿಯಾದಲ್ಲಿ ಇದೆಂಥಾ ಅನ್ಯಾಯ

KL Rahul
ಪಂಜಾಬ್: ಕೆಎಲ್ ರಾಹುಲ್ ನಂತಹ ಪ್ರತಿಭಾವಂತ, ಹಾಲಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟಿಗರಲ್ಲಿ ಒಬ್ಬರಾಗಿದ್ದರೂ ತಂಡದಲ್ಲಿ ಬ್ಯಾಟಿಂಗ್ ಅವಕಾಶ ಸಿಗುತ್ತಿಲ್ಲ. ಇದೆಂಥಾ ಅನ್ಯಾಯ ಎಂದು ಅಭಿಮಾನಿಗಳು ಬೇಸರಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ಕೆಎಲ್ ರಾಹುಲ್ ಗೆ ಏಕದಿನ ಮತ್ತು ಟೆಸ್ಟ್ ತಂಡದಲ್ಲಿ ಮಾತ್ರ ಅವಕಾಶ ಸಿಗುತ್ತಿದೆ. ಆ ಪೈಕಿ ಟೆಸ್ಟ್ ತಂಡದಲ್ಲಿ ಆರಂಭಿಕ ಸ್ಥಾನ ಸಿಗುತ್ತಿದ್ದರೆ ಏಕದಿನದಲ್ಲಿ ಅವರನ್ನು ಆಲ್ ರೌಂಡರ್ ಗಳಿಗಿಂತಲೂ ಕೆಳ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ.

ಕಳೆದ ಎರಡು ಪಂದ್ಯಗಳಲ್ಲಿ ಇಡೀ 50 ಓವರ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಆದರೆ ಕೇವಲ ಕೀಪಿಂಗ್ ಮಾಡುವುದಕ್ಕಷ್ಟೇ ಅವರು ಸೀಮಿತವಾಗಿದ್ದಾರೆ. 100 ಓವರ್ ಕೀಪಿಂಗ್ ಮಾಡಿಯೂ ಅವರಿಗೆ ಒಮ್ಮೆಯೂ ಬ್ಯಾಟಿಂಗ್ ಅವಕಾಶ ಸಿಕ್ಕಿಲ್ಲ. ಪ್ರತಿಭಾವಂತ, ಅನುಭವಿ ಬ್ಯಾಟರ್ ಇತರರು ಬ್ಯಾಟಿಂಗ್ ಮಾಡುವುದನ್ನು ನೋಡುತ್ತಾ ಪೆವಿಲಿಯನ್ ನಲ್ಲಿ ಕೂರುವುದೇ ಆಗಿದೆ.

ಕೊಂಚ ಮೇಲಿನ ಕ್ರಮಾಂಕ ನೀಡಿದಲ್ಲಿ ರಾಹುಲ್ ಗೆ ಬ್ಯಾಟಿಂಗ್ ಅವಕಾಶ ಸಿಗಬಹುದಿತ್ತೇನೋ. ಆದರೆ ಪ್ರತಿಭಾವಂತ ಕ್ರಿಕೆಟಿಗನಿಗೆ ಒಮ್ಮೆಯೂ ಬ್ಯಾಟಿಂಗ್ ಅವಕಾಶ ನೀಡದೇ ಇರುವುದಕ್ಕೆ ಅಭಿಮಾನಿಗಳು ಮತ್ತು ವೀಕ್ಷಕ ವಿವರಣೆಕಾರರೂ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಾಹುಲ್ ನಂತಹ ಆಟಗಾರನಿಗೆ ಸರಣಿಯಲ್ಲಿ ಒಮ್ಮೆಯಾದರೂ ಬ್ಯಾಟಿಂಗ್ ಅವಕಾಶ ನೀಡಬೇಕು ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಮೂರನೆಯ ಪಂದ್ಯದಲ್ಲಾದರೂ ರಾಹುಲ್ ಬ್ಯಾಟಿಂಗ್ ನೋಡುವ ಅವಕಾಶ ಸಿಗಬಹುದಾ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Asian Games 2026: ಕೊನೆಯ ಸೆಕೆಂಡ್‌ನಲ್ಲಿ ಗೋಲ್ ಧಮಾಕ, ಪಾಕಿಸ್ತಾನಕ್ಕೆ 4-3 ಆಘಾತ ನೀಡಿ ಏಷ್ಯನ್ ಗೇಮ್ಸ್ ಹಾಕಿ ಫೈನಲ್‌ಗೆ ಭಾರತ