ಮುಂಬೈ: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ದಂಪತಿ ಮುದ್ದಾದ ಮಗುವನ್ನು ಬರಮಾಡಿಕೊಂಡಿದ್ದಾರೆ. ಯಾವ ಮಗು ಇಲ್ಲಿದೆ ಡೀಟೈಲ್ಸ್.
ಇಂದು ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಐಪಿಎಲ್ ಪಂದ್ಯವಾಡಬೇಕಿತ್ತು. ಇದಕ್ಕಾಗಿ ಅವರು ಮೊನ್ನೆಯಷ್ಟೇ ತಂಡ ಕೂಡಿಕೊಂಡಿದ್ದರು. ಆದರೆ ಪಂದ್ಯಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿದ್ದಾಗ ಮನೆಯಿಂದ ಕರೆ ಬಂದ ಹಿನ್ನಲೆಯಲ್ಲಿ ಮರಳಿದ್ದರು.
ಇದೀಗ ರಾಹುಲ್ ದಂಪತಿಗೆ ಹೆಣ್ಣು ಮಗು ಜನನವಾಗಿರುವ ಖುಷಿ ಸುದ್ದಿ ಸಿಕ್ಕಿದೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅಥಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಮಗು ಜನನದ ಬಗ್ಗೆ ದಂಪತಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ. 2023 ರಲ್ಲಿ ರಾಹುಲ್ ಮತ್ತು ಅಥಿಯಾ ಮದುವೆಯಾಗಿದ್ದರು. ಕಳೆದ ವರ್ಷ ನವಂಬರ್ ನಲ್ಲಿ ಮೊದಲ ಮಗುವಿನ ಆಗಮನ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದರು.