Publish Date: Thu, 05 Feb 2026 (15:46 IST)
Updated Date: Thu, 05 Feb 2026 (16:14 IST)
ಬೆಂಗಳೂರು: ಬಿಗ್‌ಬಾಸ್ ಸೀಸನ್ 12ನ್ನು ಯಶಸ್ವಿಯಾಗಿ ಮುಗಿಸಿದ ಕಿಚ್ಚ ಸುದೀಪ್ ಬಳಿಕ ತನ್ನ ನಾಯಕತ್ವದಲ್ಲಿ ಸಿಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಕಪ್ ಎತ್ತಿಕೊಂಡಿತು.
ಇತ್ತೀಚೆಗೆ ಸುದೀಪ್ ಚಿತ್ರರಂಗದಲ್ಲಿ 30 ವರ್ಷವನ್ನು ಪೂರೈಸಿದ್ದಾರೆ. 1997ರಿಂದ ಇಲ್ಲಿಯವರೆಗೆ ಕಿಚ್ಚ ಸುಮಾರು 76 ಚಿತ್ರಗಳಲ್ಲಿ ಸುದೀಪ್ ನಟಿಸಿದ್ದಾರೆ. ಸೋಲು – ಗೆಲುವು ಎರಡರ ಅನುಭವ ಸುದೀಪ್ ಅವರಿಗೆ ಈ 30 ವರ್ಷದಲ್ಲಾಗಿದೆ. ಇನ್ನೂ ಸುದೀಪ್ ಅವರ ಸಿನಿ ಪಯಣಕ್ಕೆ ಸಿನಿಮಾ ರಂಗದವರು ಸೇರಿದಂತೆ ಗಣ್ಯರು ಶುಭಕೋರಿದ್ದರು.
ಕಿಚ್ಚ ಸುದೀಪ್ ಅವರಿಗೆ ಸಿಎಂ ಸಿದ್ದರಾಮಯ್ಯ ಕೂಡ ಶುಭ ಹಾರೈಸಿದ್ದರು. ಸುದೀಪ್ ಇದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ನನ್ನ 30 ವರ್ಷಗಳ ಪ್ರಯಾಣಕ್ಕೆ ನಿಮ್ಮ ಶುಭಾಶಯಗಳು, ಪ್ರೀತಿಯನ್ನು ತೋರಿಸಿದ್ದಕ್ಕಾಗಿ ಎಲ್ಲರಿಗೂ ತುಂಬಾ ಧನ್ಯವಾದಗಳು. ನೀವು ಇಲ್ಲದೆ ಇದೆಲ್ಲ ಆಗಲು ಸಾಧ್ಯವಿಲ್ಲವೆಂದು ಸುದೀಪ್ ಸಿಎಂ ಹಾಗೂ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ಇದರ ಜತೆಗೆ ಕಾಮನ್ ಡಿಪಿಯೊಂದಿಗೆ ಕಿಚ್ಚನಿಗೆ ಶುಭಹಾರೈಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿಮಾನಿಗಳಿಗೆ, ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದ್ದಾರೆ.