Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ನಮ್ಮ ಜೊತೆ ಆಡಲ್ಲ ಎನ್ನುವಾಗ ಕಾವ್ಯಾ ಮಾರನ್ ಗೆ ಇದೆಲ್ಲಾ ಬೇಕಿತ್ತಾ

Kavya Maran
ಮುಂಬೈ: ಒಂದು ಕಡೆ ಪಾಕಿಸ್ತಾನವೇ ನಮ್ಮ ಜೊತೆ ಕ್ರಿಕೆಟ್ ಆಡಲ್ಲ ಎಂದು ಡ್ರಾಮಾ ಮಾಡುತ್ತಿರುವಾಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿಯಾಗಿರುವ ಕಾವ್ಯಾ ಮಾರನ್ ಗೆ ಇದೆಲ್ಲಾ ಬೇಕಿತ್ತಾ ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಂಡ್ರೆಡ್ಸ್ ಹರಾಜು 2026 ರಲ್ಲಿ ಸನ್ ರೈಸರ್ಸ್ ಲೀಡ್ಸ್ ತಂಡವಿದೆ. ಐಪಿಎಲ್ ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಒಡೆತನದ ತಂಡವಿದು. ಈ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಸನ್ ರೈಸರ್ಸ್ ಗೆ ಕಾವ್ಯಾ ಪಾಕಿಸ್ತಾನದ ಆಟಗಾರನನ್ನು ಖರೀದಿಸಿದ್ದಾರೆ.

ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ರನ್ನು ಕಾವ್ಯಾ ತಮ್ಮ ತಂಡಕ್ಕೆ ಖರೀದಿ ಮಾಡಿದ್ದಾರೆ. ಇದು ಈಗ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಭಾರತದಲ್ಲಿ ಪಂದ್ಯವಾಡಲ್ಲ ಎಂದು ತಗಾದೆ ತೆಗೆಯುತ್ತಿದೆ. ಇನ್ನೊಂದೆಡೆ ಏಷ್ಯಾಕಪ್ ಟ್ರೋಫಿಯನ್ನು ಕೊಡದೇ ಉದ್ಧಟತನ ಮೆರೆಯುತ್ತಿದೆ. ಭಾರತದ ಬಗ್ಗೆ ಸಿಕ್ಕ ಸಿಕ್ಕಹಾಗೆ ಹೇಳಿಕೆ ನೀಡುತ್ತಿದ್ದಾರೆ.

ಇಂತಹ ಪಾಕಿಸ್ತಾನದ ಆಟಗಾರನನ್ನು ಖರೀದಿ ಮಾಡುವ ಅಗತ್ಯವೇನಿತ್ತು ಎಂದು ಕಾವ್ಯಾ ಮಾರನ್ ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಅಬ್ರಾರ್ ಗೆ 2.34 ಕೋಟಿ ರೂ. ಕೊಟ್ಟು ಕಾವ್ಯಾ ಖರೀದಿ ಮಾಡಿದ್ದಾರೆ. ಇದೀಗ ಕಾವ್ಯಾ ಮಾರನ್ ಗೆ ನಿಷೇಧ ಹೇರಬೇಕು ಎಂದೂ ಕೆಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಯ್ ಬಾಳೆಹಣ್ಣು ಕೊಡ್ರೋ... ಅಡುಗೆ ಮನೆಗೇ ನುಗ್ಗಿದ ಮಂಗ ಮಾಡಿದ್ದೇನು ನೋಡಿ Video