Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಜೆರ್ಸಿ ತೊಟ್ಟು ರಾಷ್ಟ್ರಗೀತೆ ಹಾಡಿದ ಕಾಶ್ಮೀರಿ ಕ್ಲಬ್ ಕ್ರಿಕೆಟಿಗರು!

ಪಾಕಿಸ್ತಾನ ಜೆರ್ಸಿ ತೊಟ್ಟು ರಾಷ್ಟ್ರಗೀತೆ ಹಾಡಿದ ಕಾಶ್ಮೀರಿ ಕ್ಲಬ್ ಕ್ರಿಕೆಟಿಗರು!
Kashmir , ಬುಧವಾರ, 5 ಏಪ್ರಿಲ್ 2017 (09:31 IST)
ಕಾಶ್ಮೀರ: ಇಲ್ಲಿನ ಸ್ಥಳೀಯ ಕ್ಲಬ್ ಕ್ರಿಕೆಟ್ ತಂಡವೊಂದು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟು, ಅವರದೇ ರಾಷ್ಟ್ರಗೀತೆ ಹಾಡುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

 

ಪ್ರಧಾನಿ ಮೋದಿ ಚೆನಾನಿ-ನಶ್ರಿ ಸುರಂಗ ಮಾರ್ಗ ಉದ್ಘಾಟನೆಗೆ ಕಾಶ್ಮೀರಕ್ಕೆ ಬರುವ ದಿನ ಪ್ರತ್ಯೇಕತಾವಾದಿಗಳು ಹರತಾಳಕ್ಕೆ ಕರೆ ನೀಡಿದ್ದರು. ಅದೇ ದಿನ ಈ ಪಂದ್ಯ ನಡೆದಿತ್ತು. ಸ್ಥಳೀಯ ಮೈದಾನವೊಂದರಲ್ಲಿ ಕ್ಲಬ್ ಹಂತದ ಈ ಪಂದ್ಯವೊಂದರಲ್ಲಿ ಬಾಬಾ ದಾರ್ಯಾ ಉದ್ ದಿನ್ ಎಂಬ ತಂಡ ಪಂದ್ಯಕ್ಕೆ ಮೊದಲು ಭಾರತದ ರಾಷ್ಟ್ರಗೀತೆ ಹಾಡುವ ಬದಲು ಪಾಕ್ ರಾಷ್ಟ್ರಗೀತೆ ಹಾಡಿದೆ.

 
ಅಲ್ಲದೆ ಪಂದ್ಯ ಆರಂಭಕ್ಕೆ ಮೊದಲು ಗೌರವಾರ್ಥವಾಗಿ ಪಾಕಿಸ್ತಾನ ರಾಷ್ಟ್ರಗೀತೆ ಹಾಡಲಾಗುತ್ತಿದೆ ಎಂದು ಉದ್ಘೋಷಕರು ಘೋಷಿಸಿದ್ದರು. ನಾವು ಕಾಶ್ಮೀರ ವಿವಾದವನ್ನು ಮರೆತಿಲ್ಲ, ಹಾಗೂ ವೈವಿದ್ಯವಾಗಿ ಕಾಣಿಸಿಕೊಳ್ಳಲು ಈ ರೀತಿ ಮಾಡಿದ್ದೆವು ಎಂದು ತಂಡದ ಮೂಲಗಳು ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಮಾರಟವಾಗದ ಇಶಾಂತ್ ಶರ್ಮಾಗೆ ಕೊನೆಗಳಿಗೆಯಲ್ಲಿ ಖುಲಾಯಿಸಿತು ಅದೃಷ್ಟ!