Publish Date: Wed, 05 Apr 2017 (09:18 IST)
Updated Date: Wed, 05 Apr 2017 (09:22 IST)
ನವದೆಹಲಿ: ಇಶಾಂತ್ ಶರ್ಮಾ ಈ ಆವೃತ್ತಿಯ ಐಪಿಎಲ್ ನಲ್ಲಿ ಮಾರಾಟವಾಗದೇ ಉಳಿದಿದ್ದರು. ಯಾವುದೇ ತಂಡವೂ ಅವರನ್ನು ಖರೀದಿಸಲು ಆಸಕ್ತಿ ತೋರಿರಲಿಲ್ಲ. ಆದರೆ ಕೊನೆಗೂ ಅವರ ಅದೃಷ್ಟ ಖುಲಾಯಿಸಿದೆ.
ಐಪಿಎಲ್ ಉದ್ಘಾಟನೆಗೆ ಒಂದು ದಿನದ ಮುಂಚೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇಶಾಂತ್ ರನ್ನು ಖರೀದಿಸಿದೆ. ಇದನ್ನು ಟ್ವಿಟರ್ ಮೂಲಕ ಪಂಜಾಬ್ ತಂಡ ಖಚಿತಪಡಿಸಿದೆ.
ಆಟಗಾರರ ಹರಾಜು ಪ್ರಕ್ರಿಯೆ ಸಂದರ್ಭ ಇಶಾಂತ್ ಮಾರಾಟವಾಗದೇ ಉಳಿದಿದ್ದರು. ಅವರ ಮೂಲ ಧನ 2 ಕೋಟಿ ರೂ. ಎಂದು ನಿಗದಿಯಾಗಿತ್ತು. ಮೂಲ ಧನ ಹೆಚ್ಚಾಗಿದ್ದರಿಂದ ಯಾವುದೇ ತಂಡ ಅವರನ್ನು ಖರೀದಿಸಲಿಲ್ಲ ಎನ್ನಲಾಗಿತ್ತು. ಇದುವರೆಗೆ ಇಶಾಂತ್ ಕೋಲ್ಕೋತ್ತಾ, ದೆಹಲಿ, ಹೈದರಾಬಾದ್ ತಂಡಗಳ ಪರ ಐಪಿಎಲ್ ಆಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ