Publish Date: Fri, 23 Nov 2018 (16:30 IST)
Updated Date: Fri, 23 Nov 2018 (16:33 IST)
ಬೆಳಗಾವಿ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಪಂದ್ಯದಲ್ಲೂ ಕರ್ನಾಟಕ ಡ್ರಾಕ್ಕೆ ತೃಪ್ತಿ ಪಟ್ಟುಕೊಂಡಿದೆ. ಮುಂಬೈ ವಿರುದ್ಧ ಆಡಿದ ದ್ವಿತೀಯ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆಯಿಂದಾಗಿ ಹೆಚ್ಚುವರಿ ಅಂಕ ಗಳಿಸಿದ ಸಮಾಧಾನ ಕರ್ನಾಟಕಕ್ಕೆ ಸಿಕ್ಕಿತು.
ಅಂತಿಮ ದಿನವಾದ ಇಂದು ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ನ 195 ರನ್ ಗಳ ಮುನ್ನಡೆ ಹೊಂದಿದ್ದ ಕರ್ನಾಟಕ ಮುಂಬೈಗೆ ಒಟ್ಟು 365 ರನ್ ಗಳ ಬೃಹತ್ ಗೆಲುವಿನ ಗುರಿ ನೀಡಿತು. ಆದರೆ ದಿನದಂತ್ಯಕ್ಕೆ ಮುಂಬೈ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸುವುದರೊಂದಿಗೆ ಪಂದ್ಯ ಡ್ರಾ ಆಯಿತು.
ಇದರೊಂದಿಗೆ ಕರ್ನಾಟಕ ಈ ಋತುವಿನ ಎರಡೂ ಪಂದ್ಯಗಳನ್ನು ಡ್ರಾ ಮಾಡಿಕೊಂಡಂತಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿದರ್ಭ ಎದುರು ಡ್ರಾ ಸಾಧಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.