Publish Date: Tue, 24 Aug 2021 (10:25 IST)
Updated Date: Tue, 24 Aug 2021 (10:45 IST)
ಲೀಡ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಎದುರಾಳಿಗಳನ್ನು ಕೆಣಕಿ ಕೈ ಸುಟ್ಟುಕೊಂಡಿದ್ದ ಇಂಗ್ಲೆಂಡ್ ಕ್ರಿಕೆಟಿಗರು ಈಗ ಪಾಠ ಕಲಿತಿದ್ದಾರೆ.
ಟೀಂ ಇಂಡಿಯಾ ಆಟಗಾರರನ್ನು ಕೆಣಕಿದ್ದರ ಫಲವಾಗಿ ಅವರು ಆಟದ ಮೂಲಕ ತಿರುಗೇಟು ಕೊಟ್ಟು, ಪಂದ್ಯವನ್ನೇ ಕಸಿದುಕೊಂಡಿದ್ದರು. ಇದಾದ ಬಳಿಕ ಸ್ವತಃ ಕೊಹ್ಲಿ ನಮ್ಮಲ್ಲಿ ಒಬ್ಬರನ್ನು ಕೆಣಕಿದರೆ ಇಡೀ ತಂಡವೇ ತಿರುಗಿಬೀಳುತ್ತೇವೆ ಎಂದಿದ್ದರು.
ಇದೀಗ ಮೂರನೇ ಟೆಸ್ಟ್ ಗೆ ಮುನ್ನ ಮಾಧ್ಯಮಗಳ ಮುಂದೆ ಮಾತನಾಡಿರುವ ಇಂಗ್ಲೆಂಡ್ ನಾಯಕ ಜೋ ರೂಟ್, ಈ ಪಂದ್ಯದಲ್ಲಿ ಅಪ್ಪಿ ತಪ್ಪಿಯೂ ನಾವು ಭಾರತೀಯ ಕ್ರಿಕೆಟಿಗರನ್ನು ಕೆಣಕುವ ಪ್ರಯತ್ನ ಮಾಡಲ್ಲ ಎಂದಿದ್ದಾರೆ. ಪಂದ್ಯವನ್ನು ಪ್ರಾಮಾಣಿಕವಾಗಿ ಆಡಲು ಪ್ರಯತ್ನಿಸುತ್ತೇವೆ. ಅನಗತ್ಯವಾದ ಮಾತಿನ ಚಕಮಕಿಯಿಂದ ಏಕಾಗ್ರತೆ ಕಳೆದುಕೊಳ್ಳಲ್ಲ ಎಂದಿದ್ದಾರೆ.