Select Your Language

Notifications

webdunia
webdunia
webdunia
webdunia

ಜಸ್‌ಪ್ರೀತ್‌ ಬೂಮ್ರಾ ನನ್ನಿಂದಲೇ ನಿಧಾನಗತಿ ಬೌಲಿಂಗ್ ಕಲಿತರು: ಪಾಕ್ ಮೂಲದ ಬೌಲರ್‌ ಶಾಕಿಂಗ್‌ ಹೇಳಿಕೆ

UAE bowler Zahoor Khan
Photo Credit X
ಮುಂಬೈ: ವಿಶ್ವ ಶ್ರೇಷ್ಠ ಬೌಲರ್‌ ಎನಿಸಿದ ಜಸ್‌ಪ್ರೀತ್‌ ಬೂಮ್ರಾ ಅವರು ತನ್ನ ವಿಭಿನ್ನ ಬೌಲಿಂಗ್‌ ಶೈಲಿಯಿಂದಲೇ ಎಲ್ಲರ ಗಮನ ಸೆಳೆದವರು. ಹಲವು ಟೂರ್ನಿಗಳಲ್ಲಿ ಮಿಂಚಿರುವ ಅವರು ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ನಾಲ್ಕು ವಿಕೆಟ್‌ ಪಡೆದು ಮಿಂಚಿದ್ದರು.

ತಾರಾ ಬೌಲರ್‌ ಬೂಮ್ರಾ ಅವರಿಗೆ ನಿಧಾನಗತಿಯ ಎಸೆತಗಳನ್ನು ಬೌಲಿಂಗ್ ಮಾಡಲು ಹೇಳಿಕೊಟ್ಟಿರುವುದು ನಾನೇ ಎಂದು ಪಾಕಿಸ್ತಾನ ಮೂಲದ ಯುಎಇ ಬೌಲರ್ ಜಹೂರ್ ಖಾನ್ ಶಾಕಿಂಗ್ ಮಾಹಿತಿ ಹೊರಹಾಕಿದ್ದಾರೆ. 

ಈ ಕುರಿತ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆ ವಿಡಿಯೊದಲ್ಲಿ ಜಹೂರ್ ಖಾನ್ ಎಂಬುವವರು 2019 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ಬೂಮ್ರಾ ಅವರ ಬೌಲಿಂಗ್ ಶೈಲಿಯಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದಾಗ, ತಾವು ನಿಧಾನಗತಿಯ ಎಸೆತಗಳನ್ನು ಹೇಗೆ ಬೌಲ್ ಮಾಡಬೇಕೆಂದು ಹೇಳಿಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಏಳು ವರ್ಷಗಳ ಹಿಂದೆ ಯುಎಇ ಲೆಗ್‌ನಲ್ಲಿ ನಡೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಆಗಿದ್ದಾಗ ಜಹೂರ್, ಬುಮ್ರಾ ಅವರ ಜೊತೆ ಬೌಲಿಂಗ್ ತಂತ್ರದ ಬಗ್ಗೆ ಚರ್ಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಬುಮ್ರಾ ಅವರಿಗೆ ನಿಧಾನಗತಿಯ ಎಸೆತಗಳನ್ನು ಹೇಗೆ ಬಳಕೆ ಮಾಡಬೇಕೆಂದು ತಿಳಿಸಿಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಇದು ನಿಜನಾ ಎಂಬುದು ಸ್ಪಷ್ಟವಾಗಿಲ್ಲ. 

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಲ್ ಫ್ರೆಂಡ್ ಜೊತೆ ಮೈದಾನದಲ್ಲಿ ಕುಣಿದ ಹಾರ್ದಿಕ್ ಪಾಂಡ್ಯಗೆ ಎದುರಾಯ್ತು ಸಂಕಷ್ಟ