Select Your Language

Notifications

webdunia
webdunia
webdunia
webdunia

ಗರ್ಲ್ ಫ್ರೆಂಡ್ ಜೊತೆ ಮೈದಾನದಲ್ಲಿ ಕುಣಿದ ಹಾರ್ದಿಕ್ ಪಾಂಡ್ಯಗೆ ಎದುರಾಯ್ತು ಸಂಕಷ್ಟ

Hardik Pandya girlfriend Mahieka
ಅಹ್ಮದಾಬಾದ್: ಟಿ20 ವಿಶ್ವಕಪ್ ಗೆಲುವಿನ ಬಳಿಕ ಗರ್ಲ್ ಫ್ರೆಂಡ್ ಜೊತೆ ಮೈದಾನದಲ್ಲಿ ಕುಣಿದ ಹಾರ್ದಿಕ್ ಪಾಂಡ್ಯಗೆ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಈಗ ದೂರು ದಾಖಲಾಗಿದೆ.

ಭಾನುವಾರ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಆಗಿತ್ತು. ಗೆಲುವಿನ ಬಳಿಕ ಅಹ್ಮದಾಬಾದ್ ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರು ತಮ್ಮ ಕುಟುಂಬದವರ ಜೊತೆ ಸೆಲೆಬ್ರೇಷನ್ ಮಾಡಿದ್ದರು.

ಹಾರ್ದಿಕ್ ಪಾಂಡ್ಯ ಗೆಳತಿ ಮಹಿಕಾ ಶರ್ಮಾ ಕೂಡಾ ಮೈದಾನಕ್ಕೆ ಬಂದಿದ್ದರು. ಅಷ್ಟೇ ಅಲ್ಲಹಾರ್ದಿಕ್ ಜೊತೆ ಕುಣಿದು ಕುಪ್ಪಳಿಸಿದ್ದರು. ಒಂದು ಹಂತದಲ್ಲಿ ಹಾರ್ದಿಕ್ ಗೆಳತಿ ಜೊತೆ ಮೈದಾನದಲ್ಲಿ ಮಲಗಿಬಿಟ್ಟಿದ್ದರು. ಅವರ ಈ ವರ್ತನೆ ಟೀಕೆಗೆ ಗುರಿಯಾಗಿತ್ತು.

ಇನ್ನು, ಹಾರ್ದಿಕ್ ಈ ರೀತಿ ಸೆಲೆಬ್ರೇಷನ್ ಮಾಡುವಾಗ ರಾಷ್ಟ್ರಧ್ವಜವನ್ನು ಹೊದಿಕೆಯಂತೆ ಕಟ್ಟಿಕೊಂಡಿದ್ದರು. ಇದೀಗ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಪ್ರಕರಣ ಅವರ ಮೇಲೆ ದಾಖಲಾಗಿದೆ. ಪುಣೆ ಮೂಲದ ವಕೀಲ ವಾಜಿದ್ ಖಾನ್ ಎಂಬವರು ಹಾರ್ದಿಕ್ ವಿರುದ್ಧ ದೂರು ನೀಡಿದ್ದಾರೆ. ಇದೀಗ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

IPL 2026: ಆರಂಭಿಕ ಪಂದ್ಯಕ್ಕೆ ಸಂಪ್ರದಾಯ ಬದಲಿಸಿದ ಐಪಿಎಲ್ ಆಡಳಿತ ಮಂಡಳಿ: ಪಂಜಾಬ್ ಫ್ಯಾನ್ಸ್ ಅಸಮಾಧಾನ