ಆಂಡ್ರೆ ರಸೆಲ್ ಅವರ 4 ವಿಕೆಟ್‌ಗಳ ಮಾರಕ ಬೌಲಿಂಗ್ ದಾಳಿಗೆ ಕೋಲ್ಕತಾ ನೈಟ್ ರೈಡರ್ಸ್ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಏಳು ರನ್ ಜಯಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿದೆ. ಕೋಲ್ಕತಾದ ಎಡನ್‌ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ನೈಟ್ ರೈಡರ್ಸ್ ಪರ ಗಂಭೀರ್ ಮತ್ತು ಉತ್ತಪ್ಪ ಅರ್ಧಶತಕಗಳನ್ನು ಸಿಡಿಸಿ ನೈಟ್‍ರೈಡರ್ಸ್‌ಗೆ ಉತ್ತಮ ವೇದಿಕೆ ಒದಗಿಸಿದರು. ಆದರೆ ಕಿಂಗ್ಸ್ ಇಲೆವನ್ ಅವರನ್ನು 3 ವಿಕೆಟ್‌ಗೆ ಸಾಧಾರಣ 164 ರನ್ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಆತಿಥೇಯ ತಂಡ ಬಳಿಕ ಪಂಜಾಬ್ ತಂಡವನ್ನು 157ಕ್ಕೆ 9 ವಿಕೆಟ್‌ಗೆ ಔಟ್ ಮಾಡಿ ಗೆಲುವು ಗಳಿಸಿತು. ಗ್ಲೆನ್ ಮ್ಯಾಕ್ಸ್‌ವೆಲ್ ಅವರ 42 ಎಸೆತಗಳ 68 ಮತ್ತು ಅಕ್ಸರ್ ಪಟೇಲ್ ಅವರ 7 ಎಸೆತಗಳ 21 ರನ್ ನಡುವೆಯೂ ಕಿಂಗ್ಸ್ ಇಲೆವನ್ ಸೋಲಪ್ಪಿತು.
ಮೊದಲಿಗೆ ಬ್ಯಾಟಿಂಗ್ ಮಾಡಿದ ಮಾಜಿ ಚಾಂಪಿಯನ್ನರಾದ ಕೊಲ್ಕತಾ ಗಂಭೀರ್ ಮತ್ತು ಉತ್ತಪ್ಪ ನೆರವಿನಿಂದ ಸುಭದ್ರ ಅಡಿಪಾಯ ಹಾಕಿತು. ಗಂಭೀರ್ 45 ಎಸೆತಗಳಲ್ಲಿ 54 ರನ್ ಮತ್ತು ಉತ್ತಪ್ಪ 49 ಎಸೆತಗಳಲ್ಲಿ 70 ರನ್ ನೆರವಿನಿಂದ 101 ರನ್ ಜತೆಯಾಟವಾಡಿದರು.
ಕೋಲ್ಕತಾದ 164 ರನ್‌ಗಳಿಗೆ ಪ್ರತಿಯಾಗಿ ಕಿಂಗ್ಸ್ ಇಲೆವನ್ 19 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು 13 ರನ್ ಗಳಿಸಿತು. ರಸೆಲ್ ಅವರು ತಮ್ಮ ಪ್ರಥಮ ಎರಡು ಓವರುಗಳಲ್ಲಿ ನೀಡಿದ ಅವಳಿ ಪೆಟ್ಟಿನಿಂದ ಕಿಂಗ್ಸ್ ಇಲೆವನ್ ಆಘಾತ ಅನುಭವಿಸಿತು.
ಕೋಲ್ಕತಾ ಸ್ಕೋರು 4 ವಿಕೆಟ್ ಕಳೆದುಕೊಂಡು 53 ರನ್‌ಗಳಾಗಿದ್ದಾಗ, ಮ್ಯಾಕ್ಸ್‌ವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 6 ಬೌಂಡರಿ ಮತ್ತು ನಾಲ್ಕು ಸಿಕ್ಸರ್‍ಗಳಿಂದ ಕೂಡಿದ 68 ರನ್ ಬಾರಿಸಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.