ಸಚಿನ್ ತೆಂಡೂಲ್ಕರ್ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಸದ್ಭಾವನಾ ರಾಯಭಾರಿಯಾಗುವ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದಕ್ಕೆ ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಬುಧವಾರ ಶುಭ ಹಾರೈಕೆ ಮಾಡಿದ್ದಾರೆ.
ತೆಂಡೂಲ್ಕರ್ ಕ್ರಿಕೆಟ್‌ನಲ್ಲಿ ರಾಷ್ಟ್ರದ ಪರ ಕೆಲವು ಅದ್ಭುತಗಳನ್ನು ಸೃಷ್ಟಿಸಿದ್ದು, ಅವರನ್ನು ರಾಯಭಾರಿಯಾಗಿ ಐಒಎ ಆಯ್ಕೆ ಮಾಡಿದ್ದು ಸರಿಯಾಗಿದೆ ಎಂದು ಗಂಗೂಲಿ ಹೇಳಿದರು.
ಸಲ್ಮಾನ್ ಖಾನ್ ಅವರನ್ನು ನೇಮಕ ಮಾಡಿದ ಕ್ರಮಕ್ಕೆ ಅನೇಕ ಕ್ರೀಡಾಳುಗಳು ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಐಒಎ ಪ್ರಸಿದ್ಧ ಕ್ರಿಕೆಟರ್ ತೆಂಡೂಲ್ಕರ್ ಮತ್ತು ಶೂಟರ್ ಅಭಿನವ್ ಭಿಂದ್ರಾ ಅವರನ್ನು ಸದ್ಭಾವನಾ ರಾಯಭಾರಿಗಳಾಗಿ ನೇಮಿಸಿದೆ.